ADVERTISEMENT

ನಾರ್ವೆ ಚೆಸ್‌ ಟೂರ್ನಿ: ಡ್ರಾ ಸಾಧಿಸಿದ ವಿಶ್ವನಾಥನ್‌ ಆನಂದ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 12:17 IST
Last Updated 7 ಜೂನ್ 2022, 12:17 IST
ವಿಶ್ವನಾಥನ್‌ ಆನಂದ್‌ (ಪಿಟಿಐ ಚಿತ್ರ)
ವಿಶ್ವನಾಥನ್‌ ಆನಂದ್‌ (ಪಿಟಿಐ ಚಿತ್ರ)   

ಸ್ಟಾವೆಂಜರ್‌, ನಾರ್ವೆ: ವಿಶ್ವನಾಥನ್‌ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ನೆದರ್ಲೆಂಡ್ಸ್‌ನ ಅನೀಶ್‌ ಗಿರಿ ಜತೆ ಡ್ರಾ ಸಾಧಿಸಿದರು. ಇದರಿಂದ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿತ ಕಂಡರು.

ಮಂಗಳವಾರ ನಡೆದ ಆನಂದ್‌– ಗಿರಿ ನಡುವಿನ ಕ್ಲಾಸಿಕಲ್‌ ಪಂದ್ಯ 35 ನಡೆಗಳಲ್ಲಿ ಕೊನೆಗೊಂಡಿತು. ಫಲಿತಾಂಶ ನಿರ್ಣಯಿಸಲು ನಡೆದ ಆರ್ಮಗೆಡನ್ (ಸಡನ್‌ ಡೆತ್‌) ಗೇಮ್‌ 45 ನಡೆಗಳಲ್ಲಿ ಡ್ರಾದಲ್ಲಿ ಅಂತ್ಯಕಂಡಿತು. 11.5 ಪಾಯಿಂಟ್ಸ್‌ ಹೊಂದಿರುವ ಆನಂದ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಗ್ರ್ಯಾಂಡ್‌ಮಾಸ್ಟರ್‌ 8ನೇ ಸುತ್ತಿನಲ್ಲಿ ತೈಮೂರ್‌ ರಜಬೊವ್‌ ಅವರನ್ನು ಎದುರಿಸುವರು.

ಅಜರ್‌ಬೈಜಾನ್‌ನ ಶಕ್ರಿಯಾರ್‌ ಮಮೆದ್ಯರೋವ್‌ ಅವರನ್ನು ಮಣಿಸಿದ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತೆ ಅಗ್ರಸ್ಥಾನಕ್ಕೇರಿದರು. ಅವರ ಬಳಿ ಒಟ್ಟು 12.5 ಪಾಯಿಂಟ್ಸ್‌ಗಳಿವೆ.

ADVERTISEMENT

ಏಳನೇ ಸುತ್ತಿನಲ್ಲಿ ಇತರ ಹಣಾಹಣಿಗಳಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಶಿರ್‌ ಲಗ್ರಾವ್, ಚೀನಾದ ಹವೊ ವಾಂಗ್‌ ವಿರುದ್ಧ; ಅಮೆರಿಕದ ವೆಸ್ಲಿ ಸೊ, ನಾರ್ವೆಯ ಆರ್ಯನ್‌ ತರಿ ವಿರುದ್ಧ ಗೆದ್ದರು. ಬಲ್ಗೇರಿಯದ ವ್ಯಾಸೆಲಿನ್‌ ಟೊಪಾಲೋವ್‌– ರಜಬೊವ್‌ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.