ADVERTISEMENT

ಚೆಸ್‌: ಮುನ್ನಡೆ ಹಂಚಿಕೊಂಡ ಗುಕೇಶ್‌

ಪಿಟಿಐ
Published 3 ಜುಲೈ 2025, 19:58 IST
Last Updated 3 ಜುಲೈ 2025, 19:58 IST
<div class="paragraphs"><p>ಗುಕೇಶ್‌</p></div>

ಗುಕೇಶ್‌

   

ಪಿಟಿಐ ಸಂಗ್ರಹ ಚಿತ್ರ

ಝಾಗ್ರೆಬ್‌ (ಕ್ರೊವೇಷ್ಯಾ): ಸತತ ಎರಡು ಪಂದ್ಯಗಳನ್ನು ಗೆದ್ದ ವಿಶ್ವ ಚಾಂಪಿಯನ್ ಗುಕೇಶ್‌, ಸೂಪರ್‌ ಯುನೈಟೆಡ್‌ ರ್‍ಯಾಪಿಡ್‌ ಮತ್ತು ಬ್ಲಿಟ್ಝ್‌ ಚೆಸ್‌ ಟೂರ್ನಿಯಲ್ಲಿ ಗುರುವಾರ  ಮೂರನೇ ಸುತ್ತಿನ ನಂತರ ಇತರ ಮೂವರು ಆಟಗಾರರೊಡನೆಅಗ್ರಸ್ಥಾನಕ್ಕೇರಿದರು.

ADVERTISEMENT

ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ (ನಾರ್ವೆ), ಯಾನ್‌ ಕ್ರಿಸ್ಟೋಫ್‌ ಡೂಡ (ಪೋಲೆಂಡ್‌) ಮತ್ತು ವೆಸ್ಲಿ ಸೊ (ಅಮೆರಿಕ) ಕೂಡ ಗುಕೇಶ್‌ ಜೊತೆ ತಲಾ ನಾಲ್ಕು ಅಂಕ ಗಳಿಸಿದ್ದಾರೆ.

ಗುಕೇಶ್‌ ಗುರುವಾರ ನಡೆದ ಪಂದ್ಯಗಳಲ್ಲಿ ಅಲಿರೇಝಾ ಫಿರೋಜ್ ಮತ್ತು ಸ್ವದೇಶದ  ಆರ್‌.ಪ್ರಜ್ಞಾನಂದ ಅವರನ್ನು ಸೋಲಿಸಿದರು. ಅಲಿರೇಝಾ ಮತ್ತು ಪ್ರಜ್ಞಾನಂದ ತಲಾ 2 ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.