ADVERTISEMENT

ಚೆಸ್‌: ಅರವಿಂದ್‌ಗೆ ನಾಲ್ಕನೇ ಸ್ಥಾನ

ಪಿಟಿಐ
Published 28 ಫೆಬ್ರುವರಿ 2020, 19:30 IST
Last Updated 28 ಫೆಬ್ರುವರಿ 2020, 19:30 IST

ಮಾಸ್ಕೊ : ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಅರವಿಂದ್‌ ಚಿದಂಬರಂ ಅವರು ಏರೋಫ್ಲಾಟ್‌ ಓಪನ್‌ ಚೆಸ್‌ ಟೂರ್ನಿಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದಾರೆ.

ಗುರುವಾರ ರಾತ್ರಿ ನಡೆದ ಒಂಬತ್ತನೇ ಮತ್ತು ಅಂತಿಮ ಸುತ್ತಿನ ಪೈಪೋಟಿಯಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್‌ ಚಿದಂಬರಂ, ರಷ್ಯಾದ ಸನನ್‌ ಜುಗಿರೋವ್ ವಿರುದ್ಧ ಡ್ರಾ ಮಾಡಿಕೊಂಡರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 6.5ಕ್ಕೆ ಹೆಚ್ಚಿಸಿಕೊಂಡರು.

ಅಜರ್‌ಬೈಜಾನ್‌ನ ರೌಫ್‌ ಮಮೆಡೊವ್‌, ಅಯದಿನ್‌ ಸುಲೇಮಾನ್ಲಿ ಮತ್ತು ಕಜಕಸ್ತಾನದ ರೀನಟ್‌ ಜುಮಾಬಯೇವ್‌ ಅವರೂ ಇಷ್ಟೇ ಪಾಯಿಂಟ್ಸ್‌ ಹೊಂದಿದ್ದರು. ಉತ್ತಮ ಟೈ ಬ್ರೇಕ್‌ ಸ್ಕೋರ್‌ ಆಧಾರದಲ್ಲಿ 14 ವರ್ಷದ ಅಯದಿನ್‌ಗೆ ಪ್ರಶಸ್ತಿ ಒಲಿಯಿತು.

ADVERTISEMENT

ಭಾರತದ ಮತ್ತೊಬ್ಬ ಗ್ರ್ಯಾಂಡ್‌ ಮಾಸ್ಟರ್‌ ಬಿ.ಅಧಿಬನ್‌, ಏಳನೇ ಸ್ಥಾನ ಪಡೆದರು. ಅಂತಿಮ ಸುತ್ತಿನಲ್ಲಿ ಅವರು ಮುಷ್ತಾಫಾ ಯಿಲಮಾಜ್‌ ವಿರುದ್ಧ ಪಾಯಿಂಟ್‌ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.