ADVERTISEMENT

ಚೆಸ್‌: ಆ್ಯಂಡ್ರಿಯಾ ಡಿಸೋಜಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 16:15 IST
Last Updated 2 ಅಕ್ಟೋಬರ್ 2018, 16:15 IST
ಮೈಸೂರಿನಲ್ಲಿ ನಡೆದ ರಾಜ್ಯ ಮಹಿಳಾ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಆ್ಯಂಡ್ರಿಯಾ ಎಲ್‌.ಡಿಸೋಜಾ (ಎಡದಿಂದ ಎರಡನೆಯವರು) ಅವರು ಮಹಿಮಾ ಶೆರಿಗಾರ್‌, ಇಶಾ ಶರ್ಮ, ಸಂಜನಾ ರಘುನಾಥ್‌ ಜೊತೆ ಇದ್ದಾರೆ
ಮೈಸೂರಿನಲ್ಲಿ ನಡೆದ ರಾಜ್ಯ ಮಹಿಳಾ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಆ್ಯಂಡ್ರಿಯಾ ಎಲ್‌.ಡಿಸೋಜಾ (ಎಡದಿಂದ ಎರಡನೆಯವರು) ಅವರು ಮಹಿಮಾ ಶೆರಿಗಾರ್‌, ಇಶಾ ಶರ್ಮ, ಸಂಜನಾ ರಘುನಾಥ್‌ ಜೊತೆ ಇದ್ದಾರೆ   

ಮೈಸೂರು: ಮಂಗಳೂರಿನ ಆ್ಯಂಡ್ರಿಯಾ ಎಲ್‌.ಡಿಸೋಜಾ ಇಲ್ಲಿ ಮಂಗಳವಾರ ಕೊನೆಗೊಂಡ ರಾಜ್ಯ ಮಹಿಳಾ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಮೈಸೂರು ಚೆಸ್‌ ಸೆಂಟರ್‌ ವತಿಯಿಂದ ನಡೆದ ಟೂರ್ನಿಯಲ್ಲಿ ಅವರು ಆರು ಪಾಯಿಂಟ್‌ ಪಡೆದು ಈ ಸಾಧನೆ ಮಾಡಿದರು. ಅಂತಿಮ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಬೆಳ್ತಂಗಡಿಯ ಇಶಾ ಶರ್ಮಾಗೆ ಆಘಾತ ನೀಡಿದರು.

ಐದೂವರೆ ಪಾಯಿಂಟ್‌ ಪಡೆದ ಇಶಾ ಮೊದಲ ರನ್ನರ್‌ ಅಪ್‌ ಪ್ರಶಸ್ತಿ ಪಡೆದರು. ಇಷ್ಟೇ ಪಾಯಿಂಟ್‌ ಗಳಿಸಿದ ಬೆಂಗಳೂರಿನ ಸಂಜನಾ ರಘುನಾಥ್‌ ದ್ವಿತೀಯ ರನ್ನರ್‌ ಅಪ್‌ ಪ್ರಶಸ್ತಿಗೆ ಭಾಜನರಾದರು. ಉಡುಪಿಯ ಮಹಿಮಾ ಶೆರಿಗಾರ್ (5ಪಾಯಿಂಟ್‌) ನಾಲ್ಕನೇ ಸ್ಥಾನ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.