ADVERTISEMENT

ಚೆಸ್‌: ಸುಜಯ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 13:17 IST
Last Updated 23 ಮಾರ್ಚ್ 2021, 13:17 IST
ಪ್ರಶಸ್ತಿಯೊಂದಿಗೆ ಚೆಸ್‌ ಪಟುಗಳು
ಪ್ರಶಸ್ತಿಯೊಂದಿಗೆ ಚೆಸ್‌ ಪಟುಗಳು   

ಬೆಂಗಳೂರು: ಸುಜಯ್ ಬಿ.ಎಂ. ಅವರು ಚಾಂಪಿಯನ್ಸ್ ಚೆಸ್‌ ಅಕಾಡೆಮಿಯು ಇತ್ತೀಚೆಗೆ ಆಯೋಜಿಸಿದ್ದ ಮುಕ್ತ ಬ್ರಿಟ್ಜ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಜಯ್‌ (3.5 ಪಾಯಿಂಟ್ಸ್), ಶ್ರೀಪಾದ್ ಕೆ.ವಿ. (3.5) ಅವರನ್ನು ಬಕ್ವರ್ತ್‌ ನಿಯಮದಡಿ ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದರು. ಮೂರು ಪಾಯಿಂಟ್ಸ್ ಕಲೆಹಾಕಿದ ಉಪೇಂದ್ರ ಮೂರನೇ ಸ್ಥಾನ ಗಳಿಸಿದರು.

16 ವರ್ಷದೊಳಗಿನವರ ವಿಭಾಗದಲ್ಲಿ ಆರ್ಯನ್ ಸೂರ್ಯ (4 ಪಾಯಿಂಟ್ಸ್) ಮೊದಲ ಸ್ಥಾನ ತಮ್ಮದಾಗಿಸಿಕೊಂಡರೆ, ಅನಿರುದ್ಧನ್‌ ಜಿ. (3) ಹಾಗೂ ಸಮರ್ಥ್‌ ಜಿ. ಮುತಾಲಿಕ್ ದೇಸಾಯಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಪ್ರಣವ್ ಅಂಕಿತ್ ಮರ್ದಯ್ಯ ನಾಲ್ಕನೇ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ ಆರ್‌.ಕೆ. ಶ್ರೇಷ್ಠ ಪಟುವಾಗಿ ಹೊರಹೊಮ್ಮಿದರು.

ADVERTISEMENT

11 ವರ್ಷದೊಳಗಿನವರ ವಿಭಾಗದ ಪ್ರಶಸ್ತಿಯು ವಿವಾನ್ ಸಚ್‌ದೇವ್ (4 ಪಾಯಿಂಟ್ಸ್) ಅವರ ಪಾಲಾಯಿತು. ಆರವ್‌ ಸರ್ಬಾಲಿಯಾ ಮತ್ತು ತರುಣ್ ಮಂಟೂರ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಆದಿತ್ಯ ಅಯ್ಯರ್‌ಗೆ ನಾಲ್ಕನೇ ಸ್ಥಾನ ಲಭಿಸಿತು. ಅನನ್ಯಾ ಮಿಶ್ರಾ ಬಾಲಕಿಯರ ವಿಭಾಗದಲ್ಲಿ ಶ್ರೇಷ್ಠ ಪಟು ಎನಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.