ADVERTISEMENT

ಚೆಸ್‌: ಅಪೂರ್ವ, ಅಕ್ಷಯಾ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 19:31 IST
Last Updated 3 ಸೆಪ್ಟೆಂಬರ್ 2022, 19:31 IST
ಅಪೂರ್ವ ಕಾಂಬ್ಳೆ
ಅಪೂರ್ವ ಕಾಂಬ್ಳೆ   

ಮಂಗಳೂರು: ಬೆಂಗಳೂರಿನ ಅಪೂರ್ವ ಕಾಂಬ್ಳೆ ಮತ್ತು ಕಾರವಾರದ ಅಕ್ಷಯಾ ಅವರು ಉಡುಪಿಯ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಮತ್ತು ಕುಂದಾಪುರದ ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ಆಯೋಜಿಸಿರುವ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮುಕ್ತ ಮತ್ತು ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು.

ಉಡುಪಿಯ ಎಲ್‌ಐಸಿಒ ಬ್ಯಾಂಕ್ ಸಭಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ 5ನೇ ಸುತ್ತಿನ ಮುಕ್ತಾಯಕ್ಕೆ ಅಪೂರ್ವ ಕಾಂಬ್ಳೆ ಮತ್ತು ಅಕ್ಷಯಾ ತಲಾ ಐದು ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಅಪೂರ್ವ ಐದನೇ ಸುತ್ತಿನಲ್ಲಿ ಬೆಂಗಳೂರಿನ ಸ್ಯಾಮ್ಯುಯೆಲ್ ಮ್ಯಾಥ್ಯೂ ಅವರನ್ನು ಮಣಿಸಿದರು. 1218 ರೇಟಿಂಗ್‌ ಹೊಂದಿರುವ ಅಕ್ಷಯಾ ಉಡುಪಿಯ ದಿಶಾ ವಿರುದ್ಧ ಗೆಲುವು ಸಾಧಿಸಿದರು.

5ನೇ ಸುತ್ತಿನ ಅಂತ್ಯಕ್ಕೆ ಅಗ್ರ ಸ್ಥಾನಗಳ ಲ್ಲಿರುವವರು: ಮುಕ್ತ ವಿಭಾಗ: ಅಪೂರ್ವ ಕಾಂಬ್ಳೆ (ಬೆಂಗಳೂರು)–5 ಪಾಯಿಂಟ್‌, ಧನುಷ್ ರಾಮ್‌ (ದಕ್ಷಿಣ ಕನ್ನಡ)–4.5, ವಿಕ್ರಾಂತ್ ಕೃಷ್ಣಕುಮಾರ್ (ಬೆಂಗಳೂರು)–4.5, ಆರಾಧ್ಯೊ ಭಟ್ಟಾಚಾರ್ಯ(ದ.ಕನ್ನಡ)–4.5. ಬಾಲಕಿಯರ ವಿಭಾಗ: ಅಕ್ಷಯಾ (ಉತ್ತರ ಕನ್ನಡ)–5, ರುದ್ರಾ ರಾಜೀವ್‌ (ದಕ್ಷಿಣ ಕನ್ನಡ)–4.5, ಗೋಪಿಕಾ ಎಂ (ಬೆಂಗಳೂರು)–4.5.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.