ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆ ಆಯೋಜಿಸಿರುವ ಮುಕ್ತ ಮತ್ತು ವಯೋಮಾನ ವಿಭಾಗದವರ ರ‍್ಯಾಪಿಡ್ ಚೆಸ್ ಟೂರ್ನಿ ಇದೇ 29ರಂದು ನಡೆಯಲಿದೆ.
ಹೊಸಕೋಟೆ ತಾಲ್ಲೂಕಿನ ತಿರುಮಲ್ ಶೆಟ್ಟಿಹಳ್ಳಿ ಕ್ರಾಸ್‌ನಲ್ಲಿರುವ ಶ್ರೀ ಲಕ್ಷ್ಮಿ ಪ್ಯಾಲೇಸ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ 7, 9, 11, 14 ವರ್ಷದೊಳಗಿನವರ ವಿಭಾಗ ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಪ್ರವೇಶಪತ್ರಗಳನ್ನು www.easypaychess.comಗೆ ಕಳುಹಿಸಬೇಕು. ಮಾಹಿತಿಗೆ www.karnatakachess.com ವೆಬ್‌ಸೈಟ್ ಅಥವಾ ಕಾರ್ಯದರ್ಶಿ ಎ.ಚಿದಾನಂದ (9663405589) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.