ADVERTISEMENT

ಚಳಿಗಾಲದ ಒಲಿಂಪಿಕ್ಸ್‌ ಮ್ಯಾಸ್ಕಟ್‌ ಆಗಿ ಪಂಡಾ

ಏಜೆನ್ಸೀಸ್
Published 17 ಸೆಪ್ಟೆಂಬರ್ 2019, 19:53 IST
Last Updated 17 ಸೆಪ್ಟೆಂಬರ್ 2019, 19:53 IST

ಬೀಜಿಂಗ್‌: ಚೀನಾ, 2022ರಲ್ಲಿ ಬೀಜಿಂಗ್‌ನಲ್ಲಿ ನಡೆ ಯಲಿರುವ ಚಳಿಗಾಲದ ಒಲಿಂಪಿಕ್ಸ್ ಮ್ಯಾಸ್ಕಟ್‌ ಆಗಿ ದೇಶದ ಪ್ರಸಿದ್ಧ ವನ್ಯಜೀವಿ ‘ಪಂಡಾ’ವನ್ನು ಮಂಗಳ ವಾರ ಆಯ್ಕೆ ಮಾಡಿದೆ.

ಹಿಮದ ಸೂಟು ಧರಿಸಿರುವ ಮುದ್ದಾಗಿ ಕಾಣುವ ಮ್ಯಾಸ್ಕಟ್‌ಗೆ ‘ಬಿಂಗ್‌ ಡ್ವೆನ್‌ ಡ್ವೆನ್‌’ ಎಂದು ಹೆಸರಿಡಲಾಗಿದೆ. ಬೀಜಿಂಗ್‌, ಬೇಸಿಗೆ ಒಲಿಂಪಿಕ್ಸ್‌ ಮತ್ತು ಚಳಿಗಾಲದ ಒಲಿಂಪಿಕ್ಸ್‌ ಆತಿಥ್ಯ ವಹಿಸಿದ ಮೊದಲ ನಗರ ಎನಿಸಲಿದೆ. 2008ರಲ್ಲಿ ಇಲ್ಲಿ ಒಲಿಂಪಿಕ್ಸ್ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT