ADVERTISEMENT

ಚಳಿಗಾಲದ ಒಲಿಂಪಿಕ್ಸ್‌ಗೆ ಅಮೆರಿಕ ಬಹಿಷ್ಕಾರ: ಚೀನಾ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 16:30 IST
Last Updated 7 ಡಿಸೆಂಬರ್ 2021, 16:30 IST
ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌  ಗ್ರಾಮದಲ್ಲಿರುವ ಉದ್ಯಾನದಲ್ಲಿರುವ ರಿಂಗ್ಸ್‌  –ರಾಯಿಟರ್ಸ್ ಚಿತ್ರ
ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌  ಗ್ರಾಮದಲ್ಲಿರುವ ಉದ್ಯಾನದಲ್ಲಿರುವ ರಿಂಗ್ಸ್‌  –ರಾಯಿಟರ್ಸ್ ಚಿತ್ರ   

ಬೀಜಿಂಗ್ (ಎಪಿ): ಮುಂದಿನ ವರ್ಷ ನಡೆಯಲಿರುವ ಚಳಿಗಾಲದ ಒಲಿಂಪಿಕ್ ಕೂಟವನ್ನು ರಾಜತಾಂತ್ರಿಕವಾಗಿ ಬಹಿಷ್ಕರಿಸಿರುವ ಅಮೆರಿಕದ ಕ್ರಮವು ಒಲಿಂಪಿಕ್ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ.

‘ಅಮೆರಿಕವು ಕ್ರೀಡೆಯನ್ನು ರಾಜಕೀಯಕರಣಗೊಳಿಸುತ್ತಿದೆ. ದೇಶಗಳ ನಡುವೆ ಬಿರುಕು ಮೂಡಿಸುವ ಹುನ್ನಾರ ಇದಾಗಿದೆ. ಗುಂಪುಗಾರಿಕೆಯನ್ನು ಪ್ರಚೋದಿಸುತ್ತಿದೆ. ಆದರೆ ಇದಕ್ಕೆಲ್ಲ ನಾವು ಜಗ್ಗುವುದಿಲ್ಲ. ಯಾರಾದರೂ ಬರಲಿ, ಬಿಡಲಿ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ ಯಶಸ್ವಿಯಾಗಿ ನಡೆಯುವುದು ಖಚಿತ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜೇನ್ ಹೇಳಿದ್ದಾರೆ.

‘ಕೂಟದಲ್ಲಿ ಭಾಗವಹಿಸುವ ಅಥ್ಲೀಟ್‌ಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಆದರೆ, ತಂಡದೊಂದಿಗೆ ಅಧಿಕಾರಿಗಳು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳು ತೆರಳುವುದಿಲ್ಲ. ಆ ಮಟ್ಟಿಗೆ ಬಹಿಷ್ಕಾರ ವ್ಯಕ್ತಪಡಿಸಲಾಗುವುದು‘ ಎಂದು ಅಮೆರಿಕ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಪಿಸಾಕಿ ಸೋಮವಾರ ಟ್ವೀಟ್ ಮಾಡಿದ್ದರು.

ADVERTISEMENT

ಈಚೆಗೆ ಚೀನಾದ ಟೆನಿಸ್ ತಾರೆ ಪೆಂಗ್ ಶುಯಿ ಅವರು ಕಾಣೆಯಾಗಿರುವ ಪ್ರಕರಣದ ನಂತರ ಚೀನಾದಲ್ಲಿ ಡಬ್ಲ್ಯುಟಿಎ ಟೂರ್ನಿಗಳ ಆಯೋಜನೆಯನ್ನು ರದ್ದುಪಡಿಸಲು ಫೆಡರೇಷನ್ ಮುಂದಾಗಿದೆ. ಚೀನಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗಿದೆ ಎಂದು ಅಮೆರಿಕ ಸೇರಿದಂತೆ ಕೆಲವು ದೇಶಗಳು ಚಳಿಗಾಲದ ಒಲಿಂಪಿಕ್ ಕೂಟವನ್ನು ಬಹಿಷ್ಕರಿಸಲು ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.