ADVERTISEMENT

ಕೊರೊನಾ ಸೋಂಕು: ಫುಟ್‌ಬಾಲ್ ಕೋಚ್‌ ಸಾವು

ಪಿಟಿಐ
Published 17 ಮಾರ್ಚ್ 2020, 19:24 IST
Last Updated 17 ಮಾರ್ಚ್ 2020, 19:24 IST
   

ಮ್ಯಾಡ್ರಿಡ್‌: ಕೊರೊನಾ ಸೋಂಕು ಲಕ್ಷಣಗಳನ್ನು ಹೊಂದಿದ್ದ ಸ್ಪೇನ್‌ ದೇಶದ ಕ್ಲಬ್‌ ಫುಟ್‌ಬಾಲ್‌ ತಂಡದ ಕೋಚ್‌ ಒಬ್ಬರು ಮೃತಪಟ್ಟಿ ದ್ದಾರೆ. ಅಟ್ಲೆಟಿಕೊ ಪೊರ್ಟಡಾ ಅಟ್ಲಾ ತಂಡಕ್ಕೆ ತರಬೇತಿದಾರರಾಗಿದ್ದ ಫ್ರಾನ್ಸಿಸ್ಕೊ ಗಾರ್ಸಿಯಾ (21) ಮೃತಪಟ್ಟವರು.

ಸೋಂಕಿನ ತೀವ್ರ ಲಕ್ಷಣಗಳು ಕಂಡುಬಂದ ಮಲಗಾ ವಲಯದ ಗಾರ್ಸಿಯಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರು ಲ್ಯೂಕೆಮಿಯಾದಿಂದ ಬಳಲುತ್ತಿದ್ದದ್ದೂ ಕಂಡುಬಂದಿದೆ.

ಲ್ಯೂಕೆಮಿಯಾ ಇಲದಿದ್ದರೆ ಗಾರ್ಸಿಯಾ ಅವರು ಬದುಕುಳಿಯುವ ಸಾಧ್ಯತೆಯಿತ್ತು ಎಂದು ವೈದ್ಯರು ಹೇಳಿದ್ದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.