ADVERTISEMENT

ಕೊಕ್ಕೊ: ನಾಲ್ಕರ ಘಟ್ಟಕ್ಕೆ ಕೇಂದ್ರ ರೇಲ್ವೆ, ಪಶ್ಚಿಮ ರೇಲ್ವೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:31 IST
Last Updated 4 ಜೂನ್ 2022, 19:31 IST
ಮಹಾರಾಷ್ಟ್ರ ರಾಜ್ಯ ಪೊಲೀಸ್‌ ತಂಡದ ಆಟಗಾರರನ್ನು ಮುಂಬೈ ಮಹಾನಗರಪಾಲಿಕೆ ತಂಡದ ಆಟಗಾರರು ಹಿಡಿಯಲು ಯತ್ನಿಸುತ್ತಿರುವುದು
ಮಹಾರಾಷ್ಟ್ರ ರಾಜ್ಯ ಪೊಲೀಸ್‌ ತಂಡದ ಆಟಗಾರರನ್ನು ಮುಂಬೈ ಮಹಾನಗರಪಾಲಿಕೆ ತಂಡದ ಆಟಗಾರರು ಹಿಡಿಯಲು ಯತ್ನಿಸುತ್ತಿರುವುದು   

ಪಾಂಡವಪುರ (ಮಂಡ್ಯ ಜಿಲ್ಲೆ): ನವಿ ಮುಂಬೈ ಮಹಾನಗರ ಪಾಲಿಕೆ ಮತ್ತು ಕೇಂದ್ರ ಕೇಂದ್ರ ರೈಲ್ವೆ ತಂಡಗಳು ಕ್ಯಾತನಹಳ್ಳಿಯಲ್ಲಿ ನಡೆಯುತ್ತಿರುವ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣಾರ್ಥ ಅಖಿಲ ಭಾರತ ಪುರುಷರ ಹೊನಲು ಬೆಳಕಿನ ಕೊಕ್ಕೊ ಟೂರ್ನಿಯ ನಾಲ್ಕರ ಘಟ್ಟ ಪ್ರವೇಶಿಸಿದವು.

ಒಟ್ಟು ಹನ್ನೊಂದು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿ ಐದು ಮತ್ತೊಂದರಲ್ಲಿ ಆರು ಗುಂಪುಗಳಿಗೆ. ಉಭಯ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿವೆ.

ನವಿ ಮುಂಬೈ ಮಹಾನಗರಪಾಲಿಕೆ ತಂಡವು 15, ಮುಂಬೈ ಕೇಂದ್ರ ರೈಲ್ವೆ ತಂಡವು 9, ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡ 12 ಹಾಗೂ ಮುಂಬೈ ಪಶ್ಚಿಮ ರೈಲ್ವೆ ತಂಡವು 12 ಅಂಕ ಗಳಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.