ADVERTISEMENT

ಅಲ್ಟ್ರಾ ಮ್ಯಾರಥಾನ್‌: ಫ್ಲೊರೆಂಟ್ ಪ್ರಥಮ

ಕಾಫಿಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್‌ಗೆ ತೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 20:02 IST
Last Updated 14 ಅಕ್ಟೋಬರ್ 2018, 20:02 IST
ಫ್ಲೊರೆಂಟ್ ಬೊಗ್ವನ್ ಅವರು ಪದಕ ಪ್ರದರ್ಶಿಸಿದ ಪರಿ
ಫ್ಲೊರೆಂಟ್ ಬೊಗ್ವನ್ ಅವರು ಪದಕ ಪ್ರದರ್ಶಿಸಿದ ಪರಿ   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ನಡೆದ ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌ನ 110 ಕಿ.ಮೀ ವಿಭಾಗದಲ್ಲಿ ಕೆನಡಾದ ಫ್ಲೊರೆಂಟ್ ಬೊಗ್ವನ್ ಮತ್ತು 80 ಕಿ.ಮೀ ವಿಭಾಗದಲ್ಲಿ ಆಸ್ಟ್ರೇಲಿಯಾದ ಟಿಮ್‌ ಹೆವಿಟ್‌ ಪ್ರಥಮ ಸ್ಥಾನ ಪಡೆದರು.

ಬೊಗ್ವನ್ 13 ಗಂಟೆ 50 ನಿಮಿಷಗಳಲ್ಲಿ, ಹೆವಿಟ್ 7 ಗಂಟೆ 59 ನಿಮಿಷಗಳಲ್ಲಿ ಕ್ರಮಿಸಿ ಗೆಲುವಿನ ನಗೆ ಬೀರಿದರು. 110 ಕಿ.ಮೀ ವಿಭಾಗದಲ್ಲಿ ಭಾರತದ ಕೊಜಿ ಬೆಪ್ಪು ಅವರು 14 ಗಂಟೆ 18 ನಿಮಿಷ, ಪ್ರಣಯ ಮೊಹಾಂತಿ ಅವರು 14 ಗಂಟೆ 34 ನಿಮಿಷಗಳಲ್ಲಿ ಗುರಿ ತಲುಪಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. 80 ಕಿ.ಮೀ ವಿಭಾಗದಲ್ಲಿ ಅಮೆರಿಕದ ಜೊ ಮೀಕ್ ಅವರು 8 ಗಂಟೆ 15 ನಿಮಿಷ ಹಾಗೂ ಭಾರತದ ಕೆ.ಸಂತೋಷ್‌ ಅವರು 8 ಗಂಟೆ 49 ನಿಮಿಷಗಳಲ್ಲಿ ಕ್ರಮಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ಕೆಮ್ಮಣ್ಣುಗುಂಡಿ ಭಾಗದ ಕಾಫಿತೋಟಗಳ ಸರ್ಪಸುತ್ತಿನ ಹಾದಿಗಳಲ್ಲಿ ದೇಶ– ವಿದೇಶಗಳ ಓಟಗಾರರು ಕಸರತ್ತು ಪ್ರದರ್ಶಿಸಿದರು. 50, 80 ಹಾಗೂ 110 ಕಿ.ಮೀ ವಿಭಾಗದಲ್ಲಿ ಸ್ಪರ್ಧೆ ನಡೆದಿತ್ತು. 50 ಕಿ.ಮೀ ಸ್ಪರ್ಧೆ ಶನಿವಾರ ಮುಗಿದಿತ್ತು. ಕಾಫೀ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್‌ ಮೂರನೇ ಅವೃತ್ತಿಗೆ ಭಾನುವಾರ ತೆರೆಬಿದ್ದಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.