ಅಪಿಯಾ, ಸಮೊವಾ: ರಾಖಿ ಹಲ್ದರ್ ಹಾಗೂ ದೇವಿಂದರ್ ಕೌರ್ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದಪಾರಮ್ಯ ಮುಂದುವರಿದಿದೆ.
ಎರಡನೇ ದಿನವಾದ ಬುಧವಾರ ಭಾರತ ಸೀನಿಯರ್, ಜೂನಿಯರ್ ಹಾಗೂ ಯೂತ್ ವಿಭಾಗ ಸೇರಿ ಒಟ್ಟು 7 ಚಿನ್ನ ಬಾಚಿಕೊಂಡಿತು.
ಕಾಮನ್ವೆಲ್ತ್ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಎಲ್ಲ ವಿಭಾಗಗಳ ಸ್ಪರ್ಧೆಯು ಏಕಕಾಲದಲ್ಲಿ ನಡೆಯುತ್ತಿದೆ.
ಮಹಿಳೆಯರ 59 ಕೆಜಿ ವಿಭಾಗದಲ್ಲಿ ದೇವಿಂದರ್ ಕೌರ್ ಅವರು ಒಟ್ಟು 184 ಕೆಜಿ (80+104) ಭಾರ ಎತ್ತುವ ಮೂಲಕ ಅಗ್ರಸ್ಥಾನ
ಗಳಿಸಿದರು.
ಇನ್ನೊಂದೆಡೆ 64 ಕೆಜಿ ವಿಭಾಗದಲ್ಲಿ ಹಲ್ದರ್ ಅವರು ಒಟ್ಟು 214 (94+120) ಭಾರ ಎತ್ತಿದರು.
ಚಾಂಪಿಯನ್ಷಿಪ್ನ ಮೊದಲ ದಿನವಾದ ಮಂಗಳವಾರಭಾರತದ ವೇಟ್ಲಿಫ್ಟರ್ಗಳು ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.