ADVERTISEMENT

ಕಾಮನ್‌ವೆಲ್ತ್‌ ಕೊಕ್ಕೊ: ಭಾರತದ ಆತಿಥ್ಯ

ಪಿಟಿಐ
Published 10 ಡಿಸೆಂಬರ್ 2025, 13:03 IST
Last Updated 10 ಡಿಸೆಂಬರ್ 2025, 13:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಜಾವಾಣಿ ಚಿತ್ರ

ನವದೆಹಲಿ: ಮುಂದಿನ ಮಾರ್ಚ್‌ 9 ರಿಂದ 14 ರವರೆಗೆ ನಡೆಯಲಿರುವ ಚೊಚ್ಚಲ ಕಾಮನ್‌ವೆಲ್ತ್ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ 24 ತಂಡಗಳು ಭಾಗವಹಿಸಲಿವೆ. ಈ ಚಾಂಪಿಯನ್‌ಷಿಪ್‌ ನಡೆಯುವ ತಾಣ ಇನ್ನೂ ಅಂತಿಮಗೊಂಡಿಲ್ಲ.

ADVERTISEMENT

ಈ ಸ್ಪರ್ಧೆಗೆ ಕಾಮನ್‌ವೆಲ್ತ್‌ ಸ್ಪೋರ್ಟ್ಸ್‌ (ಸಿಎಸ್‌) ಸಮ್ಮತಿ ದೊರೆತಿದ್ದು, ಸ್ಥಳ ನಿರ್ಧರಿಸಲು ಭಾರತ ಕೊಕ್ಕೊ ಫೆಡರೇಷನ್‌ ವಿವಿಧ ರಾಜ್ಯಗಳ ಜೊತೆ ಮಾತುಕತೆಯಲ್ಲಿದೆ.

ಈ ವರ್ಷದ ಜನವರಿಯಲ್ಲಿ ನವದೆಹಲಿಯಲ್ಲಿ ಕೊಕ್ಕೊ ವಿಶ್ವಕಪ್‌ ನಡೆದಿತ್ತು. ಆಗ 23 ತಂಡಗಳು ಭಾಗವಹಿಸಿದ್ದವು. ಅದೇ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸುವ ಉದ್ದೇಶವಿದೆ. ಪುರುಷರ  ವಿಭಾಗದಲ್ಲಿ 16 ತಂಡಗಳು ಕಣಕ್ಕಿಳಿಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.