ADVERTISEMENT

ಅಥ್ಲೆಟಿಕ್ಸ್: ಮೋಹನ್‌ ಮಿಂಚು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:41 IST
Last Updated 3 ಅಕ್ಟೋಬರ್ 2019, 19:41 IST
‌‌ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಎಂ.ಎಸ್‌.ಅಂಕಿತಾ ಜಿಗಿದ ಕ್ಷಣಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ
‌‌ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಎಂ.ಎಸ್‌.ಅಂಕಿತಾ ಜಿಗಿದ ಕ್ಷಣಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ   

ಮೈಸೂರು: ಎಂ.ಸಿ.ಮೋಹನ್‌ ಕುಮಾರ್‌ ಮತ್ತು ವಿ.ಅಂಬಿಕಾ ಅವರು ದಸರಾ ಅಥ್ಲೆಟಿಕ್ಸ್‌ನ ಶಾಟ್‌ಪಟ್‌ ಸ್ಪರ್ಧೆ ಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಗುರುವಾರ ನಡೆದ ಸ್ಪರ್ಧೆಯಲ್ಲಿ ಮೈಸೂರು ವಿಭಾಗದ ಮೋಹನ್‌, ಕಬ್ಬಿಣದ ಗುಂಡನ್ನು 16.22 ಮೀ. ದೂರ ಎಸೆದು ಅಗ್ರಸ್ಥಾನ ಪಡೆದರು. 2013ರ ಕೂಟದಲ್ಲಿ ತಾವೇ ಸ್ಥಾಪಿಸಿದ್ದ (15.92 ಮೀ.) ದಾಖಲೆ ಉತ್ತಮಪಡಿಸಿಕೊಂಡರು.

ಮೈಸೂರು ವಿಭಾಗದ ಅಂಬಿಕಾ 13.98 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು. ಪಿ.ಎಸ್‌.ಉಮಾ (13.63 ಮೀ.) ಅವರು 2016 ರಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು.

ADVERTISEMENT

ದಿನದ ಮತ್ತೊಂದು ದಾಖಲೆ ಪುರುಷರ 1,500 ಮೀ. ಓಟದಲ್ಲಿ ಮೂಡಿಬಂತು. ಬೆಂಗಳೂರು ನಗರ ವಿಭಾಗದ ವಿಶ್ವಾಂಭರ್‌ ಕೊಲೇಕರ್ 3 ನಿ. 55.30 ಸೆ.ಗಳಲ್ಲಿ (ಹಿಂದಿನ ದಾಖಲೆ 3.56 ಸೆ.) ಗುರಿ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.