ADVERTISEMENT

ಸುಶೀಲ್ ಜೊತೆ ಫೋಟೊ ತೆಗೆಸಿಕೊಂಡ ಪೊಲೀಸರು: ತನಿಖೆ ಆರಂಭ

ಪಿಟಿಐ
Published 26 ಜೂನ್ 2021, 16:38 IST
Last Updated 26 ಜೂನ್ 2021, 16:38 IST
ಸುಶೀಲ್ ಕುಮಾರ್‌– ಪಿಟಿಐ ಚಿತ್ರ
ಸುಶೀಲ್ ಕುಮಾರ್‌– ಪಿಟಿಐ ಚಿತ್ರ   

ನವದೆಹಲಿ: ಕೊಲೆ ಆರೋಪದಲ್ಲಿ ಬಂಧನದಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್ ಜೊತೆ ತನ್ನ ಸಿಬ್ಬಂದಿಯು ಫೋಟೊ ತೆಗೆಸಿಕೊಂಡಿದ್ದರ ಕುರಿತು ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ದೆಹಲಿ ಪೊಲೀಸರ ವಿಶೇಷ ತಂಡ ಮತ್ತು ಸಶಸ್ತ್ರ ಪೊಲೀಸರ ಮೂರನೇ ಬೆಟಾಲಿಯನ್ ಉಪಸ್ಥಿತಿಯಲ್ಲಿ ಸುಶೀಲ್‌ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸುವಾಗ ಮಾಂಡೋಲಿ ಜೈಲು ಆವರಣದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಶೀಲ್ ಕುಮಾರ್ ಮತ್ತು ಪೊಲೀಸರು ಮಾಸ್ಕ್‌ ಧರಿಸದೆ ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ADVERTISEMENT

‘ಘಟನೆ ಕುರಿತು ಸ್ವಯಂಪ್ರೇರಿತ ತನಿಖೆ ಆರಂಭಿಸಲಾಗಿದೆ. ತನಿಖೆಯ ವರದಿ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ‘ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರಕರಣದಲ್ಲಿ 23 ವರ್ಷದ ಸಾಗರ್ ಧನಕರ್ ಮತ್ತು ಇಬ್ಬರು ಗೆಳೆಯರ ಮೇಲೆ, ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಮತ್ತು ಸಹಚರರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಆ ಬಳಿಕ ಸಾಗರ್ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.