ADVERTISEMENT

ದಬಂಗ್ ಡೆಲ್ಲಿ ತಂಡಕ್ಕೆ ಇನ್ನೊಂದು ರೋಚಕ ಜಯ

ಪ್ರೊ ಕಬಡ್ಡಿ ಲೀಗ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 16:24 IST
Last Updated 25 ಜುಲೈ 2019, 16:24 IST
ತಮಿಳು ತಲೈವಾಸ್‌ ವಿರುದ್ಧ ಪಂದ್ಯದಲ್ಲಿ ದಾಳಿ ನಡೆಸುತ್ತಿರುವ ನವೀನ್‌ ಕುಮಾರ್‌
ತಮಿಳು ತಲೈವಾಸ್‌ ವಿರುದ್ಧ ಪಂದ್ಯದಲ್ಲಿ ದಾಳಿ ನಡೆಸುತ್ತಿರುವ ನವೀನ್‌ ಕುಮಾರ್‌   

ಹೈದರಾಬಾದ್‌: ವಿರಾಮದ ವೇಳೆ ಏಳು ಪಾಯಿಂಟ್‌ಗಳ ಹಿನ್ನಡೆಯಲ್ಲಿದ್ದ ದಬಂಗ್‌ ಡೆಲ್ಲಿ ತಂಡ ಚೇತರಿಸಿಕೊಂಡು ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಗುರುವಾರ ತಮಿಳು ತಲೈವಾಸ್‌ ಮೇಳೆ 30–29ರಲ್ಲಿ ಒಂದು ಪಾಯಿಂಟ್‌ ಅಂತರದ ರೋಚಕ ಜಯಪಡೆದರು.

ಉತ್ತಮ ಲಯದಲ್ಲಿರುವ ನವೀನ್‌ ಕುಮಾರ್‌ ಅವರ ಆಕರ್ಷಕ ರೈಡಿಂಗ್‌ ಡೆಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆ ತಮಿಳು ತಲೈವಾಸ್‌ 18–11 ರಿಂದ ಮುಂದಿತ್ತು.

ನವೀನ್‌ ಕುಮಾರ್‌ ಏಳು ರೈಡಿಂಗ್‌ ಪಾಯಿಂಟ್ಸ್ ಸೇರಿ ಎಂಟು ಪಾಯಿಂಟ್‌ ಗಳಿಸಿದರು. ತಲೈವಾಸ್‌ ಪರ ರಾಹುಲ್‌ ಚೌಧರಿ ಐದು ರೈಡಿಂಗ್‌ ಪಾಯಿಂಟ್‌ ಸೇರಿ ಏಳು ಪಾಯಿಂಟ್ಸ್‌ ಗಳಿಸಿದರು. ಮಂಜಿತ್‌ ಚಿಲ್ಲರ್‌ ನಾಲ್ಕು ಟ್ಯಾಕಲ್‌ ಸೇರಿ ಐದು ಪಾಯಿಂಟ್ಸ್‌ ಸಂಗ್ರಹಿಸಿದರು.

ADVERTISEMENT

ಬುಧವಾರ ನಡೆದ ಪಂದ್ಯದಲ್ಲೂ ಡೆಲ್ಲಿ ತಂಡ 34–33 ಪಾಯಿಂಟ್‌ಗಳಿಂದ ತೆಲುಗು ಟೈಟನ್ಸ್‌ ಮೇಲೆ ಜಯಗಳಿಸಿತ್ತು.

ಭಾನುವಾರ ಅಹಮದಾಬಾದ್‌ ಲೆಗ್‌ ಆರಂಭವಾಗಲಿದ್ದು, ದಬಂಗ್‌ ಡೆಲ್ಲಿ– ಹರಿಯಾಣ ಸ್ಟೀಲರ್ಸ್‌ ಎದುರಾಗಲಿದೆ.

ಮುಂಬೈ ಲೆಗ್‌ಗೆ ಕೊಹ್ಲಿ:ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಆ. 27ರಂದು ನಡೆಯುವ ಮುಂಬೈ ಚರಣದ ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಕಬಡ್ಡಿ ಜ್ವರಕ್ಕೆ ಕಿಚ್ಚು ಹಚ್ಚಲಿದ್ದಾರೆ. ನಂತರ ಯು–ಮುಂಬಾ ಮತ್ತು ಪುಣೇರಿ ಪಲ್ಟನ್‌ ನಡುವಣ ಪಂದ್ಯ ನಡೆಯಲಿದೆ. ಪಲ್ಟನ್‌ಗೆ ಮುಂಬಾ ತಂಡದ ಮಾಜಿ ನಾಯಕ ಅನೂಪ್‌ ಕುಮಾರ್‌ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.