ADVERTISEMENT

ಥಾಯ್ಲೆಂಡ್‌ ಮಾಸ್ಟರ್ಸ್‌: ಫೈನಲ್‌ಗೆ ದೇವಿಕಾ ಸಿಹಾಗ್‌

ಪಿಟಿಐ
Published 31 ಜನವರಿ 2026, 17:17 IST
Last Updated 31 ಜನವರಿ 2026, 17:17 IST
<div class="paragraphs"><p>ದೇವಿಕಾ ಸಿಹಾಗ್‌ -‘ಎಕ್ಸ್‌’ ಚಿತ್ರ</p></div>

ದೇವಿಕಾ ಸಿಹಾಗ್‌ -‘ಎಕ್ಸ್‌’ ಚಿತ್ರ

   

ಬ್ಯಾಂಕಾಕ್‌: ಭಾರತದ ಯುವ ಶಟ್ಲರ್ ದೇವಿಕಾ ಸಿಹಾಗ್ ಅವರು ವಿಶ್ವದ 35ನೇ ಕ್ರಮಾಂಕದ ಆಟಗಾರ್ತಿ ಹುವಾಂಗ್ ಯು–ಸುನ್ ವಿರುದ್ಧ ಶನಿವಾರ 22–20, 21–13ರಲ್ಲಿ ನೇರ ಗೇಮ್‌ಗಳಿಂದ ಗೆದ್ದು ಥಾಯ್ಲೆಂಡ್ ಮಾಸ್ಟರ್ಸ್‌ ಟೂರ್ನಿಯ ಫೈನಲ್ ತಲುಪಿದರು.

ಸೂಪರ್ 300 ಮಟ್ಟದ ಟೂರ್ನಿಯಲ್ಲಿ ಇದೇ ಮೊದಲ ಸಲ ಅವರು ಫೈನಲ್ ತಲುಪಿದ್ದಾರೆ. ಹರಿಯಾಣದ 20 ವರ್ಷ ವಯಸ್ಸಿನ ದೇವಿಕಾ ಅವರು ಬೆಂಗಳೂರಿನ ಪಡುಕೋಣೆ –ದ್ರಾವಿಡ್‌ ಶ್ರೇಷ್ಠತಾ ಕೇಂದ್ರದಲ್ಲಿ ಕೋಚ್‌ ಉಮೇಂದ್ರ ರಾಣಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ 63ನೇ ಸ್ಥಾನದಲ್ಲಿರುವ ಅವರು ಭಾನುವಾರ ಸಿಂಗಲ್ಸ್ ಕಿರೀಟಕ್ಕೆ ನಡೆಯುವ ಫೈನಲ್‌ನಲ್ಲಿ ಮಲೇಷ್ಯಾದ ಗೋ ಜಿನ್‌ ವೀ ಅವರನ್ನು ಎದುರಿಸಲಿದ್ದಾರೆ.

ಹಿಂದೆ ಸರಿದ ಸಿಂಧು

ಭಾರತದ ಆಗ್ರ ಸಿಂಗಲ್ಸ್ ಆಟಗಾರ್ತಿ ಪಿ.ವಿ. ಸಿಂಧು ಅವರು ಮುಂದಿನ ವಾರ ಆರಂಭವಾಗುವ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಷಿಪ್ಸ್‌ನಿಂದ ಹಿಂದೆಸರಿದಿದ್ದಾರೆ. ಇದರಿಂದ ಪದಕ ಗೆಲ್ಲುವ ಭಾರತದ ಆಸೆಗೆ ಹಿನ್ನಡೆಯಾಗಿದೆ. ಪಾದದ ನೋವಿನಿಂದ ಚೇತರಿಸಿಕೊಂಡಿದ್ದ ಒಲಿಂಪಿಕ್ ಪದಕ ವಿಜೇತೆ ಈಚೆಗಷ್ಟೇ ಪುನರಾಗಮನ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.