ಬೆಂಗಳೂರು: ಎರಡನೇ ಶ್ರೇಯಾಂಕದ ಲುಕ್ಷಿತಾ ಗೋಪಿನಾಥ್ ಅವರಿಗೆ ಆಘಾತ ನೀಡಿದ ಕರ್ನಾಟಕದ ದಿಶಾ ಸಂತೋಷ್ ಖಂಡೋಜಿ ಎಐಟಿಎ ಸೂಪರ್ ಸಿರೀಸ್ 16 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟರು.
ಕೆಎಸ್ಎಲ್ಟಿಎ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕಿಯರ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಬುಧವಾರ ದಿಶಾ7-5, 6-1ರಿಂದ ತಮಿಳುನಾಡಿನ ಆಟಗಾರ್ತಿಗೆ ಸೋಲುಣಿಸಿದರು.
ಅರ್ಹತಾ ಸುತ್ತಿನಲ್ಲಿ ಗೆದ್ದುಬಂದಿರುವ 14 ವರ್ಷದ ದಿಶಾ ಸೆಮಿಫೈನಲ್ನಲ್ಲಿ ವಿ. ಚಿಂಗಟಗೆರೆ ನವೀನ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ಫೈನಲ್ನ ಮತ್ತೊಂದು ಸೆಣಸಾಟದಲ್ಲಿ ನವೀನ 6-1, 6-1ರಿಂದ ಇಂದುಶಾ ನಿಮಕಾಯಲ ಎದುರು ಗೆದ್ದರು.
ಇನ್ನುಳಿದ ಪಂದ್ಯಗಳಲ್ಲಿ ಅಗ್ರಶ್ರೇಯಾಂಕದ ಹರ್ಷಿಣಿ ಎನ್. 6-2, 6-3ರಿಂದ ಅನ್ವಿ ಪುನಗಂಟಿ ಎದುರು, ಸವಿತಾ ಭುವನೇಶ್ವರನ್6-0, 6-3ರಿಂದ ಸಾನ್ವಿ ಮಿಶ್ರಾ ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟ ತಲುಪಿದರು.
ಬಾಲಕರ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಆರಾಧ್ಯ ಕ್ಷಿತಿಜ್6-1, 6-3ರಿಂದ ರೂರಿಕ್ ರಜಿನಿ ಎದುರು, ಕ್ರಿಸ್ಟೊ ಬಾಬು6-2, 6-4ರಿಂದ ಅನಂತ್ಕೃಷ್ಣ ವಿರುದ್ಧ, ಯಶ್ ಪಂಚಾಕ್ಷರಿ2-6, 4-6, 6-1ರಿಂದ ಅನುರಾಗ್ ಶೌರ್ಯ ಕಳ್ಳಂಬೆಳ್ಳ ಎದುರು, ಶ್ರೀನಿಕೇತ್ ಕಣ್ಣನ್6-3, 7-6 (7)ರಿಂದ ಪ್ರಕಾಶ್ ಸರಣ್ ಎದುರು ಗೆಲುವು ಸಾಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.