ADVERTISEMENT

ಉದ್ದೀಪನ ಮದ್ದು: ಸಿಕ್ಕಿಬಿದ್ದ 20 ಕ್ರೀಡಾಪಟುಗಳು

ಪಿಟಿಐ
Published 30 ಡಿಸೆಂಬರ್ 2023, 19:37 IST
Last Updated 30 ಡಿಸೆಂಬರ್ 2023, 19:37 IST
ಉದ್ದೀಪನ ಮದ್ದು ಪರೀಕ್ಷೆ
ಉದ್ದೀಪನ ಮದ್ದು ಪರೀಕ್ಷೆ   

ನವದೆಹಲಿ; ಅಕ್ಟೋಬರ್‌–ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಂದರ್ಭದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ವಿವಿಧ ಕ್ರೀಡೆಗಳ 20ಕ್ಕೂ ಹೆಚ್ಚು ಕ್ರೀಡಾಪಟುಗಳು ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದಾರೆ.

ಅಕ್ಟೋಬರ್ 25 ರಿಂದ ನವೆಂಬರ್ 9 ರವರೆಗೆ ನಡೆದ ಈ ಕೂಟದಲ್ಲಿ ಭಾಗವಹಿಸಿದವರ ಮಾದರಿಗಳನ್ನು ಸಂಗ್ರಹಿಸಿದ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ನಾಡಾ) 20ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ಕ್ರೀಡಾಕೂಟದಲ್ಲಿ ಅನೇಕರು ಪದಕಗಳನ್ನು ಗೆದ್ದಿದ್ದಾರೆ. ಅದರಲ್ಲಿ ಕೆಲವು ಅಂತರರಾಷ್ಟ್ರೀಯ ಸ್ಪರ್ಧಿಗಳೂ ಇದ್ದರು. ಸಿಕ್ಕಿಬಿದ್ದಿರುವವರಲ್ಲಿ ಒಂಬತ್ತು ಅಥ್ಲೀಟುಗಳು ಹಾಗೂ ಏಳು ವೇಟ್‌ಲಿಫ್ಟರ್‌ಗಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏಳು ವೇಟ್‌ಲಿಫ್ಟರ್‌ಗಳ ಪೈಕಿ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಡಬಲ್ ಕಂಚಿನ ಪದಕ ವಿಜೇತೆ ವಂದನಾ ಗುಪ್ತಾ ಸಹ ಇದ್ದಾರೆ.

ADVERTISEMENT

ಉತ್ತರ ಪ್ರದೇಶದ 29 ವರ್ಷದ ವಂದನಾ, ಗೋವಾದಲ್ಲಿ ನಡೆದ ಮಹಿಳೆಯರ 76 ಕೆ.ಜಿ ವಿಭಾಗದಲ್ಲಿ ಒಟ್ಟು 207 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನ ಗೆದ್ದಿದ್ದರು.

ನವೆಂಬರ್ 3 ರಂದು ಸಂಗ್ರಹಿಸಿದ ಮೂತ್ರದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಕಂಡುಬಂದ ನಂತರ ಸೈಕ್ಲಿಸ್ಟ್ ಅನಿತಾ ದೇವಿ ಅವರನ್ನು ನಾಡಾ ಡಿಸೆಂಬರ್ 6 ರಂದು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.