ADVERTISEMENT

ರೋಹಿತ್‌ಗೆ ಪ್ರಶಸ್ತಿ ಡಬಲ್‌

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 13:32 IST
Last Updated 12 ಅಕ್ಟೋಬರ್ 2021, 13:32 IST
ಪ್ರಶಸ್ತಿಗಳೊಂದಿಗೆ (ಎಡದಿಂದ) ಗಣೇಶ್ ಹಿರೇಮಠ, ರೋಹಿತ್ ಶಂಕರ್‌ ಮತ್ತು ದೀವಿತ್ ಯಕ್ಕುಂಡಿ
ಪ್ರಶಸ್ತಿಗಳೊಂದಿಗೆ (ಎಡದಿಂದ) ಗಣೇಶ್ ಹಿರೇಮಠ, ರೋಹಿತ್ ಶಂಕರ್‌ ಮತ್ತು ದೀವಿತ್ ಯಕ್ಕುಂಡಿ   

ಬೆಂಗಳೂರು: ಶ್ರೇಷ್ಠ ಸಾಮರ್ಥ್ಯ ತೋರಿದ ರೋಹಿತ್ ಶಂಕರ್ ಅವರು ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್‌ ಟೂರ್ನಿಯ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು. ನಾನ್‌ ಮೆಡಲ್ ಡಬಲ್ಸ್ ವಿಭಾಗದಲ್ಲಿ ದಿವಿತ್ ಯಕ್ಕುಂಡಿ ಮತ್ತು ಗಣೇಶ್ ಹಿರೇಮಠ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಮಲ್ಲೇಶ್ವರಂ ಸಂಸ್ಥೆ ಆಯೋಜಿಸಿರುವ ಟೂರ್ನಿಯಲ್ಲಿ ಜೂನಿಯರ್ ಬಾಲಕರ ಸಿಂಗಲ್ಸ್ ಹಾಗೂ 19 ವರ್ಷದೊಳಗಿನವರ ವಿಭಾಗದಲ್ಲಿ ರೋಹಿತ್ ಅವರಿಗೆ ಪ್ರಶಸ್ತಿಗಳು ಒಲಿದವು.

ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ರೋಹಿತ್‌ 11–7, 9–11, 11–6, 9–11, 11–5, 11–5ರಿಂದ ಆಕಾಶ್‌ ಕೆ.ಜೆ. ಅವರನ್ನು ಮಣಿಸಿದರು.

ADVERTISEMENT

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ರೋಹಿತ್‌ 11–7, 6–11, 11–8, 11–5, 11–9ರಿಂದ ವರುಣ್ ಕಶ್ಯಪ್ ಎದುರು ಜಯಿಸಿದ್ದರೆ, ಆಕಾಶ್‌ 11–5, 11–1, 11–5, 11–5ರಿಂದ ಪಿ.ವಿ. ಶ್ರೀಕಾಂತ್ ಕಶ್ಯಪ್ ಎದುರು ಗೆದ್ದಿದ್ದರು.

ಬಾಲಕರ 19 ವರ್ಷದೊಳಗಿನವರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರೋಹಿತ್‌ 4–11, 14–12, 11–4, 13–11, 11–8ರಿಂದ ಶ್ರೀಕಾಂತ್ ಕಶ್ಯಪ್‌ ಅವರನ್ನು ಸೋಲಿಸಿದರು.

ಸೆಮಿಫೈನಲ್‌ ಸೆಣಸಾಟದಲ್ಲಿ ಶ್ರೀಕಾಂತ್ ಕಶ್ಯಪ್‌ 15–13, 11–4, 11–4, 11–8ರಿಂದ ಸಮ್ಯಕ್ ಕಶ್ಯಪ್‌ ಎದುರು, ರೋಹಿತ್‌ 2–11, 11–8, 11–5, 11–9, 11–7ರಿಂದ ಆಕಾಶ್‌ ವಿರುದ್ಧ ಗೆಲುವು ಸಾಧಿಸಿದ್ದರು.

ನಾನ್‌ ಮೆಡಲ್ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ದೀವಿತ್‌ ಹಾಗೂ ಗಣೇಶ್‌ 1-8, 9-11,9-11,11-9,11-7ರಿಂದ ಕೌಸ್ತುಭ್ ರಾವ್‌ ಮತ್ತು ಆಯುಷ್‌ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.