ADVERTISEMENT

ಕಿಪ್‌ಚೊಗ್‌, ದಲಿಲಾಗೆ ಪ್ರಶಸ್ತಿ

ಏಜೆನ್ಸೀಸ್
Published 24 ನವೆಂಬರ್ 2019, 19:48 IST
Last Updated 24 ನವೆಂಬರ್ 2019, 19:48 IST
ಎಲ್ಯೂಡ್‌ ಕಿಪ್‌ಚೊಗ್‌
ಎಲ್ಯೂಡ್‌ ಕಿಪ್‌ಚೊಗ್‌   

ಮೊನಾಕೊ : ಕೆನ್ಯಾದ ಎಲ್ಯೂಡ್‌ ಕಿಪ್‌ಚೊಗ್‌ ಮತ್ತು ಅಮೆರಿಕದ ದಲಿಲಾ ಮಹಮ್ಮದ್‌ ಅವರು ವಿಶ್ವ ಅಥ್ಲೆಟಿಕ್ಸ್‌ ನೀಡುವ ‘ವರ್ಷದ ಶ್ರೇಷ್ಠ ಅಥ್ಲೀಟ್‌’ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.

35 ವರ್ಷದ ಕಿಪ್‌ಚೊಗ್‌ ಅವರು ಎರಡು ಗಂಟೆಯೊಳಗೆ ಮ್ಯಾರಥಾನ್‌ ಪೂರ್ಣಗೊಳಿಸಿ ಚಾರಿತ್ರಿಕ ಸಾಧನೆ ಮಾಡಿದ್ದರು. ಹೋದ ತಿಂಗಳು ವಿಯೆನ್ನಾದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಅವರು 42.195 ಕಿಲೊ ಮೀಟರ್ಸ್‌ ಗುರಿಯನ್ನು 1 ಗಂಟೆ 59 ನಿಮಿಷ 40.2 ಸೆಕೆಂಡುಗಳಲ್ಲಿ ಕ್ರಮಿಸಿದ್ದರು.

ದಲಿಲಾ ಅವರು ಈ ವರ್ಷ ದೋಹಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀಟರ್ಸ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ 52.16 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದರೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. 4X100 ಮೀಟರ್ಸ್‌ ರಿಲೆ ಸ್ಪರ್ಧೆಯಲ್ಲೂ ಭಾಗವಹಿಸಿದ್ದ ಅವರು ಚಿನ್ನದ ಪದಕ ಜಯಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.