ADVERTISEMENT

ಡೋಪಿಂಗ್‌: ಇಥಿಯೋಪಿಯಾದ ಜೆರ್ಫ್ ವೊಂಡೆಮಗೆಗನ್‌ಗೆ 5 ವರ್ಷ ನಿಷೇಧ

ಏಜೆನ್ಸೀಸ್
Published 23 ಏಪ್ರಿಲ್ 2024, 14:41 IST
Last Updated 23 ಏಪ್ರಿಲ್ 2024, 14:41 IST
<div class="paragraphs"><p>ಜೆರ್ಫ್ ವೊಂಡೆಮಗೆಗನ್ </p></div>

ಜೆರ್ಫ್ ವೊಂಡೆಮಗೆಗನ್

   

ಎಕ್ಸ್ ಚಿತ್ರ

ಮೊನಾಕೊ: ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಇಥಿಯೋಪಿಯಾದ ದೂರ ಅಂತರದ ಓಟಗಾರ್ತಿ ಜೆರ್ಫ್‌ ವೊಂಡೆಮಗೆಗನ್‌ಗೆ ಐದು ವರ್ಷ ನಿಷೇಧ ಹೇರಲಾಗಿದೆ.  ‌

ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 3000 ಮೀಟರ್‌ ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಎಂಟನೇ ಸ್ಥಾನ ಮತ್ತು ಬುಡಾಪೆಸ್ಟ್‌ನಲ್ಲಿ ನಡೆದ 2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜೆರ್ಫ್ ನಾಲ್ಕನೇ ಸ್ಥಾನ ಪಡೆದಿದ್ದರು. ಮೂರು ಮಾದರಿಗಳಲ್ಲಿ ಎರಡನ್ನು ಅವರು ಹಂಗೇರಿಯಲ್ಲಿದ್ದಾಗ ತೆಗೆದುಕೊಳ್ಳಲಾಗಿದೆ ಮತ್ತು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ.

 ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಜೆರ್ಫ್ ಒಪ್ಪಿಕೊಂಡಿದ್ದಾರೆ. ಅವರು ನೀಡಿದ ಮಾದರಿಯಲ್ಲಿ ಟೆಸ್ಟೋಸ್ಟೆರಾನ್‌ ಹಾಗೂ ಮತ್ತೊಂದು ಪದಾರ್ಥ ಇಪಿಒ ಪತ್ತೆಯಾಗಿದೆ. ಇದು ಕ್ರೀಡಾಪಟುಗಳ ರಕ್ತಕ್ಕೆ ಹೆಚ್ಚಿನ ಆಮ್ಲಜನಕ ಪೂರೈಸಲು ಸಹಾಯ ಮಾಡುತ್ತದೆ ಎಂದು ಅಥ್ಲೆಟಿಕ್ಸ್ ಇಂಟಿಗ್ರಿಟಿ ಘಟಕ ಸೋಮವಾರ ಪ್ರಕಟಿಸಿದ ತೀರ್ಪಿನಲ್ಲಿ ತಿಳಿಸಿದೆ.

ತೀವ್ರ ರಕ್ತಹೀನತೆ ಮತ್ತು ಮೂತ್ರಪಿಂಡದ ಸೋಂಕಿಗೆ ಚಿಕಿತ್ಸೆ  ನೀಡಲು ಜೆರ್ಫ್ ಅವರಿಗೆ ಔಷಧಿಯಾಗಿ ಇಪಿಒ ನೀಡಲಾಗಿದೆ ಎಂದು ವೈದ್ಯರಿಂದ ಇ-ಮೇಲ್ ಸಾಕ್ಷ್ಯ ಸ್ವೀಕರಿಸಲಾಗಿದೆ ಎಂದು ಎಐಯು ತೀರ್ಪು ಹೇಳಿದೆ. ಆದರೆ, ಅವರು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘಿಸಿದ್ದಾರೆ ಎಂದೂ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.