ADVERTISEMENT

ಪದಾಧಿಕಾರಿಗಳ ಆಯ್ಕೆಗೆ ಟೇಕ್ವಾಂಡೊ ಫೆಡರೇಷನ್‌ಗೆ ಸೂಚನೆ

ಪಿಟಿಐ
Published 6 ಮೇ 2022, 13:37 IST
Last Updated 6 ಮೇ 2022, 13:37 IST
ಟೇಕ್ವಾಂಡೊ ಕ್ರೀಡೆಯ ಸೊಬಗು –ಪ್ರಜಾವಾಣಿ ಚಿತ್ರ
ಟೇಕ್ವಾಂಡೊ ಕ್ರೀಡೆಯ ಸೊಬಗು –ಪ್ರಜಾವಾಣಿ ಚಿತ್ರ   

ನವದೆಹಲಿ: ಟೇಕ್ವಾಂಡೊ ಫೆಡರೇಷನ್‌ನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗೆ ಟೇಕ್ವಾಂಡೊ ಸಂಸ್ಥೆಯನ್ನು ಸೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಟೇಕ್ವಾಂಡೊ ಫೆಡರೇಷನ್‌ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಆಯುಕ್ತ ಮತ್ತು ಚುನಾವಣಾಧಿಕಾರಿಯನ್ನಾಗಿ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಈಚೆಗೆ ನೇಮಕ ಮಾಡಲಾಗಿತ್ತು. ಅವರ ಸಮಕ್ಷಮದಲ್ಲಿ, ಇಬ್ಬರು ಟೇಕ್ವಾಂಡೊ ಆಟಗಾರರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರೇಕಾ ಪಳ್ಳಿ ನಡೆಸಿದ್ದರು.

ಟೇಕ್ವಾಂಡೊಗೆ ಸೂಕ್ತ ಫೆಡರೇಷನ್ ಇಲ್ಲ. ಇದರಿಂದಾಗಿ ಕ್ರೀಡಾಪಟುಗಳು ತೊಂದರೆಗೆ ಒಳಗಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎರಡು ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು ಅವರು ನಿರ್ದೇಶನ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.