ADVERTISEMENT

ಜಪಾನ್‌ನಲ್ಲಿ ಸುಮೊ ಕುಸ್ತಿ ಕಲರವ

ರಾಯಿಟರ್ಸ್
Published 19 ಜುಲೈ 2020, 14:16 IST
Last Updated 19 ಜುಲೈ 2020, 14:16 IST
ಜಪಾನ್‌ನಲ್ಲಿ ಭಾನುವಾರ ಸುಮೊ ಕುಸ್ತಿ ಪಂದ್ಯಾವಳಿಗಳು ಪುನರಾರಂಭಗೊಂಡಿವೆ.ಈ ವೇಳೆ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಅಧಿಕಾರಿಯೊಬ್ಬರು ಓದಿದರು– ಎಎಫ್‌ಪಿ ಚಿತ್ರ
ಜಪಾನ್‌ನಲ್ಲಿ ಭಾನುವಾರ ಸುಮೊ ಕುಸ್ತಿ ಪಂದ್ಯಾವಳಿಗಳು ಪುನರಾರಂಭಗೊಂಡಿವೆ.ಈ ವೇಳೆ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಅಧಿಕಾರಿಯೊಬ್ಬರು ಓದಿದರು– ಎಎಫ್‌ಪಿ ಚಿತ್ರ   

ಟೋಕಿಯೊ: ಮುಖಗವಸು ಧರಿಸಿಕೊಂಡು, ಅಂತರ ಕಾಯ್ದುಕೊಂಡ ಅಭಿಮಾನಿಗಳು ಭಾನುವಾರ ಜಪಾನ್‌ನಲ್ಲಿ ಆರಂಭವಾದ ಸುಮೊ ಕುಸ್ತಿ ಪಂದ್ಯಾವಳಿಗೆ ಸಾಕ್ಷಿಯಾದರು. ಕೋವಿಡ್‌ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ ಟೂರ್ನಿಗಳು ಐದು ತಿಂಗಳ ಬಳಿಕ ಇಲ್ಲಿ ಪುನರಾರಂಭವಾದವು.

ಮೇ ತಿಂಗಳಲ್ಲಿ ನಿಗದಿಯಾಗಿದ್ದ ಟೂರ್ನಿಯೊಂದು ಕೊರೊನಾ ಹಾವಳಿಯ ಕಾರಣ ರದ್ದಾಗಿತ್ತು. ಮಾರ್ಚ್‌ನಲ್ಲಿ ನಡೆದ ಸ್ಪ್ರಿಂಗ್‌ ಗ್ರ್ಯಾಂಡ್‌ ಟೂರ್ನಿಗೆ ಪ್ರೇಕ್ಷಕರಿಗೆ ನಿರ್ಬಂಧವಿತ್ತು.

ಈ ತಿಂಗಳ ಆರಂಭದಲ್ಲಿ ಗೊತ್ತು ಮಾಡಲಾಗಿದ್ದ ಟೂರ್ನಿಯು ಎರಡು ವಾರಗಳ ಬಳಿಕ ಶುರುವಾಗಿದೆ. ಈ ಮೊದಲು ಕೇಂದ್ರ ಜಪಾನ್‌ನ ನಾಗೋಯಾದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ರಾಜಧಾನಿ ಟೋಕಿಯೊಗೆ ಸ್ಥಳಾಂತರಿಸಲಾಗಿದೆ.

ADVERTISEMENT

11,000 ಆಸನ ಸಾಮರ್ಥ್ಯದ ರ‍್ಯೊಗೊಕು ಕೋಕುಗಿಕಾನ್‌ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಗೆ ಜಪಾನ್‌ ಸುಮೊ ಸಂಸ್ಥೆಯು (ಜೆಎಸ್‌ಡಬ್ಲ್ಯು) ದಿನವೊಂದಕ್ಕೆ 2,500 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದೆ. ಟೂರ್ನಿಯು ಎರಡು ವಾರಗಳ ಕಾಲ ನಡೆಯಲಿದೆ.

ಸುಮೊ ಕುಸ್ತಿ ಪಟುಗಳು ಮನೆಯಿಂದ ಅನಗತ್ಯವಾಗಿ ಹೊರಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮನೆಯಲ್ಲಿದ್ದು ತರಬೇತಿ ನಡೆಸಲು ಹೇಳಲಾಗಿದೆ.

ಭಾನುವಾರ ನಡೆದ ಹಣಾಹಣಿಯಲ್ಲಿ ಗ್ರ್ಯಾಂಡ್‌ ಚಾಂಪಿಯನ್‌ ಹಕುಹೊ ಗೆಲುವಿನ ಖಾತೆ ತೆರೆದರು. ಟೂರ್ನಿಯ ವೇಳೆ ಪ್ರೇಕ್ಷಕರು ಅಂತರ ಪಾಲಿಸಬೇಕಿದ್ದು, ನಾಲ್ವರು ಕೂರಬೇಕಾದ ಆಸನದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.