ADVERTISEMENT

ಅನ್ನುರಾಣಿಗೆ ಚಿನ್ನ

ಫೆಡರೇಷನ್ ಕಪ್ ಅಥ್ಲೆಟಿಕ್ಸ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 20:15 IST
Last Updated 4 ಏಪ್ರಿಲ್ 2022, 20:15 IST

ಕ್ಯಾಲಿಕಟ್‌: ಒಲಿಂಪಿಯನ್‌ ಅನ್ನುರಾಣಿ ಅವರು ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದರು.

ಮಹಿಳೆಯರ ಜಾವೆಲಿನ್ ಥ್ರೊನಲ್ಲಿ ಅವರು ಸೋಮವಾರ 61.5 ಮೀಟರ್ಸ್ ಸಾಧನೆ ಮಾಡಿದರು. ಶಿಲ್ಪಾ ರಾಣಿ ಬೆಳ್ಳಿ (55.72 ಮೀ.) ಮತ್ತು ಸಂಜನಾ ಚೌಧರಿ (54.19 ಮೀ.) ಕಂಚು ಗಳಿಸಿದರು.

ಕರ್ನಾಟಕದ ಕೃಷಿಕ್ ಎಂ. ಅವರಿಗೆ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ((14.60 ಸೆಕೆಂಡು)) ಕಂಚು ಗೆದ್ದರೆ , ಪುರುಷರ ಹೈಜಂಪ್‌ನಲ್ಲಿ ಜೆಸ್ಸೆ ಸಂದೇಶ್‌ (2.15 ಮೀ., ಕಂಚು) ಮಿಂಚಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.