ADVERTISEMENT

ಫೆನೆಸ್ತಾ ಓಪನ್ ಟೆನಿಸ್‌ ಚಾಂಪಿಯನ್‌ಷಿಪ್‌: ಫೈನಲ್‌ಗೆ ಕರ್ನಾಟಕದ ಪದ್ಮಾ

ಪಿಟಿಐ
Published 10 ಅಕ್ಟೋಬರ್ 2025, 15:51 IST
Last Updated 10 ಅಕ್ಟೋಬರ್ 2025, 15:51 IST
<div class="paragraphs"><p>ಪದ್ಮಾ ರಮೇಶ್‌ಕುಮಾರ್‌</p></div>

ಪದ್ಮಾ ರಮೇಶ್‌ಕುಮಾರ್‌

   

ನವದೆಹಲಿ: ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ಪದ್ಮಾ ರಮೇಶ್‌ಕುಮಾರ್‌ ಅವರು ಫೆನೆಸ್ತಾ ಓಪನ್ ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಷಿಪ್‌ನ 14 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಶುಕ್ರವಾರ ಫೈನಲ್‌ ತಲುಪಿದರು.

ಅಗ್ರ ಶ್ರೇಯಾಂಕದ ಪದ್ಮಾ ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ 6–1, 6–3ರಿಂದ ದೀಪ್ತಿ ವೆಂಕಟೇಶನ್‌ ಅವರನ್ನು ಸುಲಭವಾಗಿ ಮಣಿಸಿದರು.

ADVERTISEMENT

ಪ್ರಶಸ್ತಿ ಸುತ್ತಿನಲ್ಲಿ ಪದ್ಮಾ ಅವರು ಎರಡನೇ ಶ್ರೇಯಾಂಕದ ಜೆನ್ಸಿ ಕನಬಾರ್‌ ವಿರುದ್ಧ ಸೆಣಸಲಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ಜೆನ್ಸಿ ಅವರು 6–2, 6–0ಯಿಂದ ನೇರ ಸೆಟ್‌ಗಳಲ್ಲಿ ಜಾಹ್ನವಿ ಟಿ. ಅವರನ್ನು ಹಿಮ್ಮೆಟ್ಟಿಸಿದ್ದರು.

ಆದರೆ, 16 ವರ್ಷದೊಳಗಿನ ಬಾಲಕಿಯರ ಸೆಮಿಫೈನಲ್‌ನಲ್ಲಿ ರಾಜ್ಯದ ಸ್ನಿಗ್ಧಾ ಕಾಂತಾ ಅವರು 3–6, 1–6ರಿಂದ ಅಗ್ರಶ್ರೇಯಾಂಕದ ಪಾರ್ಥಸಾರಥಿ ಅರುಣ್‌ ಮುಂಢೆ ಎದುರು ಸೋತು ಟೂರ್ನಿಯಿಂದ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.