ADVERTISEMENT

ಫ್ರೆಂಚ್‌ ಓಪನ್‌: ಸೈನಾ ನಿರ್ಗಮನ

ಸೆಮಿಫೈನಲ್‌ಗೆ ಮುನ್ನಡೆದ ಕೊರಿಯಾದ ಆ್ಯನ್‌ ಸೆ ಯಂಗ್‌

ಪಿಟಿಐ
Published 25 ಅಕ್ಟೋಬರ್ 2019, 18:44 IST
Last Updated 25 ಅಕ್ಟೋಬರ್ 2019, 18:44 IST

ಪ್ಯಾರಿಸ್‌ : ಭಾರತದ ಸೈನಾ ನೆಹ್ವಾಲ್‌, ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಹೋರಾಟ ತೋರಿದರೂ ಅಂತಿಮವಾಗಿ ಕೊರಿಯಾದ ಆ್ಯನ್‌ ಸೆ ಯಂಗ್‌ ಅವರಿಗೆ ನೇರ ಆಟಗಳಲ್ಲಿ ಸೋಲಬೇಕಾಯಿತು.

ಶುಕ್ರವಾರ ನಡೆದ ಪಂದ್ಯದಲ್ಲಿ 29 ವರ್ಷದ ಸೈನಾ, 49 ನಿಮಿಷಗಳ ತೀವ್ರ ಹೋರಾಟದ ನಂತರ 20–22, 21–23ರಲ್ಲಿ ವಿಶ್ವ 16ನೇ ಕ್ರಮಾಂಕದ ಯಂಗ್ ಎದುರು ಸೋಲೊಪ್ಪಬೇಕಾಯಿತು.

ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ ತಲುಪಿದ ನಂತರ ಮೊದಲ ಬಾರಿ ಸೈನಾ ಇಲ್ಲಿ ಎಂಟರ ಘಟಕ್ಕೆ ಮುನ್ನಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.