ADVERTISEMENT

ಸೀನಿಯರ್ ಮಹಿಳಾ ಹಾಕಿ ತಂಡದಲ್ಲಿ ಐದು ಹೊಸಮುಖ

ಪಿಟಿಐ
Published 14 ಏಪ್ರಿಲ್ 2025, 14:39 IST
Last Updated 14 ಏಪ್ರಿಲ್ 2025, 14:39 IST
<div class="paragraphs"><p>ಹಾಕಿ</p></div>

ಹಾಕಿ

   

ನವದೆಹಲಿ: ಇದೇ ತಿಂಗಳ 26 ರಿಂದ ಮೇ 4ರವರೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ಸೀನಿಯರ್ ಮಹಿಳಾ ಹಾಕಿ ತಂಡದಲ್ಲಿ ಐದು ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ.

ಈ ಪ್ರವಾಸದಲ್ಲಿ ಭಾರತ ತಂಡ ಐದು ಪಂದ್ಯಗಳನ್ನು ಆಡಲಿದೆ. ಪ್ರವಾಸಕ್ಕೆ ತೆರಳುವ 26 ಆಟಗಾರ್ತಿಯರ ತಂಡವನ್ನು ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತದ ವನಿತೆಯರು ಆಸ್ಟ್ರೇಲಿಯಾ ‘ಎ’ ತಂಡವನ್ನ ಎದುರಿಸಲಿದ್ದಾರೆ. ನಂತರ ಮೂರು ಪಂದ್ಯಗಳಲ್ಲಿ ಸೀನಿಯರ್ ತಂಡವನ್ನು ಎದುರಿಸಲಿದೆ. ಎಲ್ಲ ಪಂದ್ಯಗಳು ಪರ್ತ್‌ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ADVERTISEMENT

ಜೂನ್‌ನಲ್ಲಿ ನಡೆಯಲಿರುವ ಮುಂದಿನ ಸಾಲಿನ ಎಫ್‌ಐಎಚ್‌ ಪ್ರ ಲೀಗ್‌ನ ಯುರೋಪಿಯನ್ ಲೆಗ್‌ಗೆ ಸಿದ್ಧತೆ ನಡೆಸುವ ದೃಷ್ಟಿಯಿಂದ ಈ ಪ್ರವಾಸ ತಂಡಕ್ಕೆ ಮಹತ್ವದ್ದಾಗಿದೆ.

ಜ್ಯೋತಿ ಸಿಂಗ್‌, ಸುಜಾತಾ ಕುಜೂರ್‌, ಅಜ್ಮಿನಾ ಕುಜೂರ್‌, ಪೂಜಾ ಯಾದವ್‌ ಮತ್ತು ಮಹಿಮಾ ಟೆಟೆ ಅವರು ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಲೀಮಾ ಟೆಟೆ ತಂಡದ ನಾಯಕಿಯಾಗಿ ಮುಂದುವರಿದಿದ್ದಾರೆ. ನವನೀತ್ ಕೌರ್ ಉಪನಾಯಕಿಯಾಗಿದ್ದಾರೆ. ತಂಡ ಅನುಭವಿಗಳ ಮತ್ತು ಹೊಸ ಪ್ರತಿಭೆಗಳ ಸಮ್ಮಿಶ್ರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.