ADVERTISEMENT

ಫಾರ್ಮುಲಾ ರೇಸ್‌: ಕುಶ್‌ಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 18:55 IST
Last Updated 26 ಅಕ್ಟೋಬರ್ 2019, 18:55 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಕುಶ್‌ ಮೈನಿ
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಕುಶ್‌ ಮೈನಿ   

ಬೆಂಗಳೂರು: ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ಕುಶ್‌ ಮೈನಿ ಅವರು ಫಾರ್ಮುಲಾ ರೆನಾಲ್ಟ್‌ ಯುರೋಕಪ್‌ ಮೋಟರ್‌ ರೇಸ್‌ನ ರೂಕಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಅಬುಧಾಬಿಯ ಯಸ್‌ ಮರಿನಾ ಸರ್ಕ್ಯೂಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ರೇಸ್‌ನಲ್ಲಿ ಬೆಂಗಳೂರಿನ ಕುಶ್‌ ಈ ಸಾಧನೆ ಮಾಡಿದರು. ಇಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 102ಕ್ಕೆ ಹೆಚ್ಚಿಸಿಕೊಂಡು ಡ್ರೈವರ್‌ಗಳ ಚಾಂಪಿಯನ್‌ಷಿಪ್‌ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದರು.

ಆರನೇ ಸ್ಥಾನದಿಂದ ಸ್ಪರ್ಧೆ ಆರಂಭಿಸಿದ್ದ ಕುಶ್‌, ಶುರುವಿನಲ್ಲಿ ಸೆಬಾಸ್ಟಿಯನ್‌ ಫರ್ನಾಂಡಿಸ್‌ ಅವರನ್ನು ಹಿಂದಿಕ್ಕಿದರು. ನಂತರದ ಲ್ಯಾಪ್‌ಗಳಲ್ಲಿ ಇನ್ನಷ್ಟು ವೇಗವಾಗಿ ಮೋಟರ್‌ ಕಾರು ಚಲಾಯಿಸಿ ಎಲ್ಲರ ಗಮನ ಸೆಳೆದರು.

ADVERTISEMENT

‘ಇರುಳಿನಲ್ಲಿ ನಡೆದ ರೇಸ್‌ನಲ್ಲಿ ಇದೇ ಮೊದಲ ಸಲ ಭಾಗವಹಿಸಿದ್ದೆ. ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದಿದ್ದು ಖುಷಿ ನೀಡಿದೆ’ ಎಂದು ಕುಶ್‌, ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.