ADVERTISEMENT

ಡಬ್ಲ್ಯುಟಿಟಿ ಕಂಟೆಂಡರ್‌: ಸತ್ಯನ್–ಹರ್ಮೀತ್‌ಗೆ ಡಬಲ್ಸ್‌ ಗರಿ

ಪಿಟಿಐ
Published 30 ಅಕ್ಟೋಬರ್ 2021, 14:44 IST
Last Updated 30 ಅಕ್ಟೋಬರ್ 2021, 14:44 IST
ಪ್ರಶಸ್ತಿಯೊಂದಿಗೆ ಹರ್ಮೀತ್ ದೇಸಾಯಿ (ಎಡ) ಹಾಗೂ ಜಿ. ಸತ್ಯನ್‌– ಟ್ವಿಟರ್‌ ಚಿತ್ರ
ಪ್ರಶಸ್ತಿಯೊಂದಿಗೆ ಹರ್ಮೀತ್ ದೇಸಾಯಿ (ಎಡ) ಹಾಗೂ ಜಿ. ಸತ್ಯನ್‌– ಟ್ವಿಟರ್‌ ಚಿತ್ರ   

ಟ್ಯೂನಿಸ್‌, ಟ್ಯೂನಿಷಿಯಾ: ಭಾರತದ ಜಿ.ಸತ್ಯನ್ ಹಾಗೂ ಹರ್ಮೀತ್ ದೇಸಾಯಿ ಅವರು ಇಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಇಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿಯು 11-9, 4-11, 11-9, 11-6ರಿಂದ ಫ್ರಾನ್ಸ್‌ನ ಇಮ್ಯಾನ್ಯುಯೆಲ್‌ ಲೆಬೆಸನ್‌ ಮತ್ತು ಅಲೆಕ್ಸಾಂಡರ್‌ ಕ್ಯಾಸಿನ್ ಅವರನ್ನು ಪರಾಭವಗೊಳಿಸಿದರು.

ಅಂತರರಾಷ್ಟ್ರೀಯ ಪ್ರೊ ಟೂರ್‌ನಲ್ಲಿ ಸತ್ಯನ್‌– ಹರ್ಮೀತ್ ಜೋಡಿಗೆ ಒಲಿದ ಮೊದಲ ಪ್ರಶಸ್ತಿ ಇದು. ಮೊದಲ ಗೇಮ್ ಗೆದ್ದ ಇವರಿಬ್ಬರು ಎರಡನೇ ಗೇಮ್‌ಅನ್ನು ಭಾರೀ ಅಂತರದಿಂದ ಎದುರಾಳಿಗೆ ಒಪ್ಪಿಸಿದರು. ಆದರೆ ಮೂರು ಮತ್ತು ನಾಲ್ಕನೇ ಗೇಮ್‌ಗಳಲ್ಲಿ ಲಯಕ್ಕೆ ಮರಳಿ ಜಯ ತಮ್ಮದಾಗಿಸಿಕೊಂಡರು.

ADVERTISEMENT

ಸೆಮಿಫೈನಲ್‌ ಪಂದ್ಯದಲ್ಲೂ ಜಿದ್ದಾಜಿದ್ದಿ ಪೈಪೋಟಿ ನಡೆಸಿದ್ದ ಸತ್ಯನ್–ಹರ್ಮೀತ್‌ 8-11, 12-14, 11-9, 11-8, 11-9ರಿಂದ ಹಂಗರಿಯ ನ್ಯಾಂದೊರ್‌ ಎಕ್ಸೆಕಿ ಮತ್ತು ಆ್ಯಡಂ ಜುಡಿ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.