ಬೆಂಗಳೂರು: ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಸೈಕ್ಲಿಂಗ್‌ನಲ್ಲಿ ರಾಜ್ಯಕ್ಕೆ ಸೋಮವಾರ ಒಂದು ಕಂಚಿನ ಪದಕ ಲಭಿಸಿದೆ. 21 ವರ್ಷದೊಳಗಿನ ಪುರುಷರ 100 ಕಿಮೀ ರೋಡ್ ರೇಸ್‌ನಲ್ಲಿ ಬೆಂಗಳೂರಿನ ಜಿ.ಟಿ.ಗಗನ್ ರೆಡ್ಡಿ ಈ ಸಾಧನೆ ಮಾಡಿದರು. 2 ತಾಸು 34 ನಿಮಿಷ 15.764 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.