ADVERTISEMENT

ಅಡೆತಡೆ ಲೆಕ್ಕಿಸದೆ ಮುನ್ನುಗ್ಗಿದ ಗಿಲ್‌ಗೆ ‘ಗೌರವ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
ಗೌರವ್‌ ಗಿಲ್
ಗೌರವ್‌ ಗಿಲ್   

ನವದೆಹಲಿ (ಪಿಟಿಐ): ತಾಂತ್ರಿಕ ದೋಷ ಕಾಣಿಸಿಕೊಂಡ ಮತ್ತು ಸತತವಾಗಿ ಪಂಕ್ಚರ್ ಆದ ವಾಹನವನ್ನು ಸರಿಪಡಿಸುತ್ತ ಮುನ್ನುಗ್ಗಿದ ಭಾರತದ ಅಗ್ರ ಕ್ರಮಾಂಕದ ರ‍್ಯಾಲಿ ವಾಹನ ಚಾಲಕ ಗೌರವ್‌ ಗಿಲ್ ಅವರನ್ನು ಪ್ರತಿಸ್ಪರ್ಧಿಗಳು ಮತ್ತು ದೇಶದ ಪ್ರಮುಖ ಚಾಲಕರು ಕೊಂಡಾಡಿದ್ದಾರೆ.

‌ಟರ್ಕಿಯಲ್ಲಿ ನಡೆದ ಎಫ್‌ಐಎ ವಿಶ್ವ ರ‍್ಯಾಲಿ ಚಾಂಪಿಯನ್‌ಷಿಪ್‌ 2ರ ಮೊದಲ ಸ್ಪರ್ಧೆಯಲ್ಲಿ ಅವರು ಆಘಾತ ಕಂಡರು. ಆದರೆ ತೊಂದರೆಗಳನ್ನು ಲೆಕ್ಕಿಸದೆ ಛಲದಿಂದ ಸ್ಪರ್ಧೆ ಮುಗಿಸಿದ ಅವರು ಪ್ರಶಂಸೆಗೆ ಪಾತ್ರರಾದರು.

ಅಗ್ರ ಐದರಲ್ಲಿ ಸ್ಥಾನ ಗಳಿಸುವ ಗುರಿಯೊಂದಿಗೆ ಕೊನೆಯ ದಿನ ಕಣಕ್ಕೆ ಇಳಿದ ಗೌರವ್ ಮೊದಲ ಹಂತದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಮುಂದಿನ ಹಂತದಲ್ಲಿ ಭಾರಿ ವೇಗದೊಂದಿಗೆ ವಾಹನ ಚಲಾಯಿಸಿದ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆದರೆ ಅಂತಿಮ ಹಂತದಲ್ಲಿ ವಾಹಕ ಕೈಕೊಟ್ಟಿತು. ಹೀಗಾಗಿ ನಿರಾಸೆ ಅನುಭವಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.