ಸೊಟೊಗ್ರಾಂಡ್, ಸ್ಪೇನ್ (ಪಿಟಿಐ): ಭಾರತದ ಗಗನ್‌ಜೀತ್ ಭುಲ್ಲಾರ್, ಇಲ್ಲಿ ನಡೆಯುತ್ತಿರುವ ಆ್ಯಂಡಲೂಸಿಯಾ ಮಾಸ್ಟರ್ಸ್ ಗಾಲ್ಫ್ ಟೂರ್ನಿಯಲ್ಲಿ ಜಂಟಿ ಐದನೇ ಸ್ಥಾನ ಪಡೆದಿದ್ದಾರೆ.
ಶನಿವಾರ ನಡೆದ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಗಗನ್‌ಜೀತ್ ಉತ್ತಮ ಸಾಮರ್ಥ್ಯ ತೋರಿದರು. ಈ ಮೂಲಕ ಒಟ್ಟು 139 ಸ್ಕೋರ್ ಕಲೆಹಾಕಿದರು. ಆರು ಮಂದಿ ಗಾಲ್ಫರ್‌ಗಳು ಜಂಟಿ ಐದನೇ ಸ್ಥಾನದಲ್ಲಿದ್ದಾರೆ.
ಭಾರತದ ಮತ್ತೊಬ್ಬ ಸ್ಪರ್ಧಿ ಶಿವ ಕಪೂರ್, ಜಂಟಿ 55ನೇ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 144 ಸ್ಕೋರ್ ಗಳಿಸಿದ್ದಾರೆ. ಎಸ್‌ಎಸ್‌ಪಿ ಚೌರಾಸಿಯಾ ಮತ್ತು ಶುಭಂಕರ್ ಶರ್ಮಾ ಅವರು ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾದರು.
ದಕ್ಷಿಣ ಆಫ್ರಿಕಾದ ಕ್ರಿಸ್ಟಿಯನ್ ಬಿಜುಯಿಡೆನ್‌ಹೌಟ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಸ್ಪೇನ್‌ನ ಅಲ್ವರೊ ಕ್ವಿರೋಸ್ ಮತ್ತು ಸರ್ಜಿಯೊ ಗಾರ್ಸಿಯಾ ಸೇರಿದಂತೆ ಒಟ್ಟು ಮೂರು ಮಂದಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.