ADVERTISEMENT

ಮಹಿಳಾ ಗಾಲ್ಫ್‌ ಓಪನ್: ಇತಿಹಾಸ ನಿರ್ಮಿಸಲು ಭಾರತದ ಆಟಗಾರ್ತಿಯರು ಸಜ್ಜು

ಅದಿತಿ, ತ್ವೇಸಾ, ದೀಕ್ಷಾ ಭಾಗಿ

ಪಿಟಿಐ
Published 19 ಆಗಸ್ಟ್ 2020, 11:06 IST
Last Updated 19 ಆಗಸ್ಟ್ 2020, 11:06 IST
ಅದಿತಿ ಅಶೋಕ್–ಎಎಫ್‌ಪಿ ಚಿತ್ರ
ಅದಿತಿ ಅಶೋಕ್–ಎಎಫ್‌ಪಿ ಚಿತ್ರ   

ರಾಯಲ್‌ ಟ್ರೂನ್‌, ಇಂಗ್ಲೆಂಡ್‌: ಕರ್ನಾಟಕದಅದಿತಿ ಅಶೋಕ್, ದೀಕ್ಷಾ ದಾಗರ್‌ ಹಾಗೂ ತ್ವೇಸಾ ಮಲಿಕ್‌ ಅವರು ಗುರುವಾರದಿಂದ ಇಲ್ಲಿ ನಡೆಯಲಿರುವ ಎಐಜಿ ಮಹಿಳಾ ಗಾಲ್ಫ್‌ ಓಪನ್‌ ಟೂರ್ನಿಯಲ್ಲಿ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ಮೇಜರ್‌ ಟೂರ್ನಿಯೊಂದರಲ್ಲಿ ಭಾರತದ ಮೂವರು ಆಟಗಾರ್ತಿಯರು ಕಣಕ್ಕಿಳಿಯುತ್ತಿರುವುದು ಇದು ಮೊದಲ ಬಾರಿ.

ತ್ವೇಸಾ ಅವರಿಗೆ ಇದು ಮೊದಲ ಮೇಜರ್‌ ಟೂರ್ನಿಯಾಗಿದೆ. ಅದಿತಿ ಅವರು 2018ರ ಮಹಿಳಾ ಓಪನ್‌ನಲ್ಲಿ 22ನೇ ಸ್ಥಾನ ಗಳಿಸಿದ್ದು ಇದುವರೆಗಿನ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಕೋವಿಡ್‌–19 ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಟೂರ್ನಿಗೆ ಪ್ರೇಕ್ಷಕರ ನಿರ್ಬಂಧವಿದೆ.

ADVERTISEMENT

‘ಈ ಟೂರ್ನಿಯಲ್ಲಿ ಆಡುತ್ತಿರುವುದು ಒಂದು ದೊಡ್ಡ ಗೌರವ. ಈ ಅವಕಾಶ ಪಡೆಯಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಈ ಪ್ರಯಾಣದಲ್ಲಿ ಬಹಳಷ್ಟು ಜನ ಬೆಂಬಲ ನೀಡಿದ್ದಾರೆ. ಸ್ಕಾಟಿಷ್‌ ಓಪನ್‌ನಲ್ಲಿ ಜಾಗರೂಕತೆಯಿಂದ ಆಡಿದೆ. ಈ ಟೂರ್ನಿಯಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕುವುದಿಲ್ಲ. ನನ್ನ ನೈಜ ಆಟವಾಡುತ್ತೇನೆ‘ ಎಂದು ದೀಕ್ಷಾ ಹೇಳಿದ್ದಾರೆ.

22 ವರ್ಷದ ಅದಿತಿ ಅವರಿಗೆ ಇದು 15ನೇ ಮೇಜರ್‌ ಟೂರ್ನಿ. ಮೂರು ಯೂರೋಪಿಯನ್‌ ಮಹಿಳಾ ಟೂರ್‌ಗಳಲ್ಲಿ (ಎಲ್‌ಇಟಿ) ಅವರು ಪ್ರಶಸ್ತಿ ಜಯಿಸಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು ಇಲ್ಲಿನ ಗಾಲ್ಫ್‌ ಅಂಗಣ ಸ್ವಲ್ಪ ಒದ್ದೆಯಾಗಿದೆ. ಐತಿಹಾಸಿಕ ಅಂಗಣದಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ಈ ವಾರ ಆಟದಲ್ಲಿ ಕಂಡುಬಂದ ನಿಖರತೆ ಸಕಾರಾತ್ಮಕ ಅಂಶ. ಈ ವಾರ ಗಾಳಿಯ ತೀವ್ರತೆಯು ಕಡಿಮೆ ಇರಲಿದೆ ಎಂದುಕೊಂಡಿದ್ದೇನೆ‘ ಎಂದು ಅದಿತಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.