ADVERTISEMENT

ಹೀರೋ ಮಹಿಳಾ ಪ್ರೊ ಗಾಲ್ಫ್‌ ಟೂರ್ನಿ: ಡ್ರಾಲ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:44 IST
Last Updated 21 ಫೆಬ್ರುವರಿ 2020, 19:44 IST
ಚಾಂಪಿಯನ್‌ ಅಮನ್‌ದೀಪ್‌ ಡ್ರಾಲ್‌ ಹಾಗೂ ರನ್ನರ್‌ಅಪ್‌ ವಾಣಿ ಕಪೂರ್‌–ಪ್ರಜಾವಾಣಿ ಚಿತ್ರ
ಚಾಂಪಿಯನ್‌ ಅಮನ್‌ದೀಪ್‌ ಡ್ರಾಲ್‌ ಹಾಗೂ ರನ್ನರ್‌ಅಪ್‌ ವಾಣಿ ಕಪೂರ್‌–ಪ್ರಜಾವಾಣಿ ಚಿತ್ರ   

ಬೆಂಗಳೂರು: ಪಂಜಾಬ್‌ನ ಅಮನ್‌ದೀಪ್‌ ಡ್ರಾಲ್‌ ಅವರು ಹೀರೊ ಮಹಿಳಾ ಪ್ರೋ ಗಾಲ್ಫ್‌ ಟೂರ್ನಿಯ ನಾಲ್ಕನೇ ಲೆಗ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ. ಬೆಂಗಳೂರು ಗಾಲ್ಫ್‌ ಅಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಶುಕ್ರವಾರ ಅವರು ದೆಹಲಿಯ ವಾಣಿ ಕಪೂರ್‌ ಎರಡನೇ ಸ್ಥಾನ ಗಳಿಸಿದರು.

ಟೂರ್ನಿಯ ಮೂರೂ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡೇ ಬಂದ ಅಮನ್‌ದೀಪ್‌ ಸಹಜವಾಗಿಯೇ ಪ್ರಶಸ್ತಿ ಒಲಿಸಿಕೊಂಡರು.

ಬೆಂಗಳೂರು ಗಾಲ್ಫರ್‌ ಅಸ್ಮಿತಾ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರೆ,ನಾಲ್ಕನೇ ಸ್ಥಾನ ಖುಷಿ ಖನಿಜಾವು ಪಾಲಾಯಿತು. ನೇಹಾ ತ್ರಿಪಾಠಿ ಹಾಗೂ ಒವಿಯಾ ರೆಡ್ಡಿ ಜಂಟಿ ಐದನೇ ಸ್ಥಾನ ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.