ADVERTISEMENT

ಬಂಡೀಪುರ ಟಸ್ಕರ್ಸ್ ಜಯಭೇರಿ

ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌: ಕೊಡಗು ಟೈಗರ್ಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 14:30 IST
Last Updated 14 ಆಗಸ್ಟ್ 2022, 14:30 IST
ಕೊಡಗು ಟೈಗರ್ಸ್ ತಂಡದ ರುಜುಲಾ ರಾಮು ಆಟದ ಪರಿ– ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್
ಕೊಡಗು ಟೈಗರ್ಸ್ ತಂಡದ ರುಜುಲಾ ರಾಮು ಆಟದ ಪರಿ– ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್   

ಬೆಂಗಳೂರು: ಬಂಡೀಪುರ ಟಸ್ಕರ್ಸ್ ತಂಡವು ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕೊಡಗು ಟೈಗರ್ಸ್‌ಗೆ ಸೋಲುಣಿಸಿತು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾನುವಾರ ಬಂಡೀಪುರ ತಂಡಕ್ಕೆ 6–3ರಿಂದ ಜಯ ಒಲಿಯಿತು.

ಮಹಿಳಾ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಕೊಡಗು ಟೈಗರ್ಸ್ ತಂಡವು ರುಜುಲಾ ರಾಮು ಅವರನ್ನು ಕಣಕ್ಕಿಳಿಸಿತು. ಈ ‘ಟ್ರಂಪ್‌’ ಹಣಾಹಣಿಯಲ್ಲಿ ರುಜುಲಾ9-15, 11-15ರಿಂದ ಅಲ್ಫಿಯಾ ರಿಯಾಜ್ ಅವರನ್ನು ಮಣಿಸಿದರು. ಆದರೆ ಪುರುಷರ ಡಬಲ್ಸ್ ‘ಟ್ರಂಪ್’ ಪಂದ್ಯದಲ್ಲಿ ಬಂಡೀಪುರ ತಂಡದ ಅಭಿಷೇಕ್ ಎಲಿಗಾರ– ವೈಭವ್ ವಿ. ಜೋಡಿ15-13, 11-15, 15-8ರಿಂದ ಆದರ್ಶ್ ಕುಮಾರ್–ವಸಂತ್ ಕುಮಾರ್ ಅವರನ್ನು ಮಣಿಸಿ ಸಮಬಲ ಸಾಧಿಸಿತು.

ಈ ಹಂತದಲ್ಲಿ ಆಟ ಮತ್ತಷ್ಟು ರಂಗೇರಿತು. ಪುರುಷರ ಸಿಂಗಲ್ಸ್ ಪಂದ್ಯದಲ್ಲೂ ಅಭಿಷೇಕ್‌15-6, 15-7ರಿಂದ ವಿಶೇಷ್ ಶರ್ಮಾ ಅವರಿಗೆ ಸೋಲುಣಿಸಿ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ ಮಿಶ್ರ ಡಬಲ್ಸ್‌ನಲ್ಲಿ ಕೊಡಗು ತಂಡದ ಸನೀತ್ ದಯಾನಂದ್ ಮತ್ತು ರಮ್ಯಾ ವೆಂಕಟೇಶ್ ಜೋಡಿ 15–10, 15–12ರಿಂದ ಗೆದ್ದು ಮತ್ತೆ ಪಂದ್ಯ ಸೆಣಸಾಟ ಸಮಬಲವಾಗುವಂತೆ ಮಾಡಿದರು.

ನಿರ್ಣಾಯಕ ಸೂಪರ್ ಪಂದ್ಯದಲ್ಲಿ ಬಂಡೀಪುರ ತಂಡದ ಡ್ಯಾನಿಯಲ್ ಫರೀದ್‌, ವೈಭವ್ ವಿ. ಮತ್ತು ಗಣೇಶ್‌ ವಿಠ್ಠಲ ಜೀ ಅವರು 21–16ರಿಂದ ಸನೀತ್ ದಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.