ADVERTISEMENT

ಏ. 29ರಂದು ಜಿಪಿಬಿಎಲ್‌ ಹರಾಜು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:45 IST
Last Updated 7 ಮಾರ್ಚ್ 2023, 19:45 IST

ಬೆಂಗಳೂರು: ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ (ಜಿಪಿಬಿಎಲ್‌) ಎರಡನೇ ಆವೃ ತ್ತಿಯ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಏ.29ರಂದು ನಡೆಯಲಿದೆ.

‘ಎರಡನೇ ಆವೃತ್ತಿಯನ್ನು ರಾಷ್ಟ್ರಮಟ್ಟದ ಲೀಗ್‌ ಆಗಿ ಆಯೋಜಿಸಲಾಗುತ್ತದೆ. ಕರ್ನಾಟಕ ಅಲ್ಲದೆ ದೇಶದ ವಿವಿಧ ಭಾಗಗಳ ಸ್ಪರ್ಧಿಗಳು ಹರಾ ಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶದ 50 ಮಂದಿ ಸೇರಿ 250 ಆಟಗಾರರು ಮತ್ತು ಆಟಗಾರ್ತಿಯರು ಭಾಗವಹಿಸುವರು’ ಎಂದು ಜಿಪಿಬಿಎಲ್ ಕಮಿಷನರ್‌ ಮತ್ತು ಬಿಟ್‌ಸ್ಪೋರ್ಟ್ ಸಿಇಒ ಪ್ರಶಾಂತ್‌ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT