ADVERTISEMENT

ಅಥೆನ್ಸ್ ಮ್ಯಾರಥಾನ್: ಕೆಲಾಜೊಸ್ ಗ್ಲೋರಿಯಾ ಜಯಭೇರಿ

ಏಜೆನ್ಸೀಸ್
Published 14 ನವೆಂಬರ್ 2021, 13:15 IST
Last Updated 14 ನವೆಂಬರ್ 2021, 13:15 IST
ಗ್ಲೋರಿಯಾ ಟಿಜಿಯೊವನ್ ಪ್ರಿವಿಲಿಗಿಯೊ
ಗ್ಲೋರಿಯಾ ಟಿಜಿಯೊವನ್ ಪ್ರಿವಿಲಿಗಿಯೊ   

ಅಥೆನ್ಸ್: ಕಾನಸ್ಟೆಂಟಿನೊಸ್ ಕೆಲಾಜೊಸ್ ಮತ್ತು ಗ್ಲೋರಿಯಾ ಟಿಜಿಯೊವನ್ ಪ್ರಿವಿಲಿಗಿಯೊ ಭಾನುವಾರ ನಡೆದ 38ನೇ ಅಥೆನ್ಸ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

31 ವರ್ಷದ ಗ್ರೀಕ್ ಓಟಗಾರ ಕೆಲಾಜೊಸ್ 42 ಕಿ.ಮೀ ದೂರವನ್ನು 2 ಗಂಟೆ, 16 ನಿಮಿಷ ಮತ್ತು 49 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಇದರೊಂದಿಗೆ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ನಿಕೊಸ್ ಪೊಲಿಯಾಸ್ ಅವರು ಮಾಡಿದ್ದ (2ನಿ, 17ನಿ, 26ಸೆ) ದಾಖಲೆಯನ್ನು ಅಳಿಸಿಹಾಕಿದರು.

ಗ್ರೀಸ್‌ನವರೇ ಆದ ಪೆನಾಜಿಯೊಟಿಸ್ ಪೌರಿಕಾಸ್ ಮತ್ತು ಚಾರ್ಲಾಂಪೊಸ್ ಪಿಸ್ತೊಲಿಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ADVERTISEMENT

ಮಹಿಳೆಯರ ವಿಭಾಗದಲ್ಲಿಯೂ ಗ್ರೀಸ್‌ ದೇಶದ ಗ್ಲೋರಿಯಾ (2ಗಂ, 41ನಿ,30ಸೆ) ಮೊದಲ ಸ್ಥಾನ ಪಡೆದರು.

ವಿದೇಶಿ ಓಟಗಾರರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಆತಿಥೇಯ ದೇಶದ ಅಥ್ಲೀಟ್‌ಗಳು ಪಾರಮ್ಯ ಮೆರೆದರು. ಎರಡು ವರ್ಷಗಳ ನಂತರ ನಡೆದ ಸ್ಪರ್ಧೆಯಲ್ಲಿ 2555 ಸ್ಪರ್ಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.