ADVERTISEMENT

ದಕ್ಷಿಣ ಭಾರತ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷರಾಗಿ ಗುಣರಂಜನ್

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:03 IST
Last Updated 3 ಮೇ 2025, 16:03 IST
ಗುಣರಂಜನ್‌ ಶೆಟ್ಟಿ
ಗುಣರಂಜನ್‌ ಶೆಟ್ಟಿ   

ಬೆಂಗಳೂರು: ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿರುವ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ದಕ್ಷಿಣ ಭಾರತ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷರಾಗಿ ಚುನಾಯಿತಗೊಂಡಿದ್ದಾರೆ.

ದಕ್ಷಿಣ ಭಾರತ ಕುಸ್ತಿ ಸಂಸ್ಥೆಗೆ ಈಚೆಗೆ ಚುನಾವಣೆ ನಡೆಯಿತು. 2025–29ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕರ್ನಾಟಕದ ಜೆ. ಶ್ರೀನಿವಾಸ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಆರ್.ಕೆ. ಪುರುಷೋತ್ತಮ್ (ಪೋಷಕ), ಕೇರಳದ ವಿ.ಎನ್. ಪ್ರಸೂದ್ (ಅಧ್ಯಕ್ಷ), ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ (ಉಪಾಧ್ಯಕ್ಷ), ತಮಿಳುನಾಡಿನ ಎಂ. ಲೋಗನಾಥನ್ (ಪ್ರಧಾನ ಕಾರ್ಯದರ್ಶಿ), ಜೆ. ಶ್ರೀನಿವಾಸ, ತೆಲಂಗಾಣದ ಅಹಮ್ಮದ್ (ಜಂಟಿ ಕಾರ್ಯದರ್ಶಿ), ಪುದುಚೇರಿಯ ವಿನೋಥ್ ಕೆ (ಖಜಾಂಚಿ), ತಮಿಳುನಾಡಿನ ಐ.ಸಿ. ಕೊಂಡೇಶ್ವರನ್, ಕೇರಳದ ಬಿ. ರಾಜಶೇಖರನ್ ನಾಯರ್ ಮತ್ತು ಆಂಧ್ರಪ್ರದೇಶದ ಭೂಷಣ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ. 

ADVERTISEMENT

‘ನಾಲ್ಕು ವರ್ಷದ ನಂತರ ದಕ್ಷಿಣ ಭಾರತ ಕುಸ್ತಿ ಸಂಸ್ಥೆಗೆ ಚುನಾವಣೆ ನಡೆದಿದೆ. ಕುಸ್ತಿ ಕ್ರೀಡೆಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ದಕ್ಷಿಣ ಭಾರತಕ್ಕೆ ಉತ್ತಮ ಪ್ರಾತಿನಿಧ್ಯ ದೊರಕಿಸಿಕೊಡುವುದು ನನ್ನ ಗುರಿ’ ಎಂದು ಭಾರತ ಕುಸ್ತಿ ಫೆಡರೇಷನ್‌ನ ಜಂಟಿ ಕಾರ್ಯದರ್ಶಿಯೂ ಆಗಿರುವ  ಗುಣರಂಜನ್ ಶೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.