ADVERTISEMENT

ಪುರುಷರ ರಿಲೇ: ರಾಷ್ಟ್ರೀಯ ದಾಖಲೆ

ಪಿಟಿಐ
Published 30 ಏಪ್ರಿಲ್ 2025, 17:09 IST
Last Updated 30 ಏಪ್ರಿಲ್ 2025, 17:09 IST
ಗುರಿಂದರ್‌ವೀರ್ ಸಿಂಗ್, ಅಮ್ಲಾನ್ ಬೋರ್ಗೊಹೈನ್, ಮಣಿಕಂಠ ಹೋಬಳಿದಾರ್ ಮತ್ತು ಅನಿಮೇಶ್ ಕುಜುರ್
ಗುರಿಂದರ್‌ವೀರ್ ಸಿಂಗ್, ಅಮ್ಲಾನ್ ಬೋರ್ಗೊಹೈನ್, ಮಣಿಕಂಠ ಹೋಬಳಿದಾರ್ ಮತ್ತು ಅನಿಮೇಶ್ ಕುಜುರ್    

ಚಂಡೀಗಢ: ಗುರಿಂದರ್‌ವೀರ್ ಸಿಂಗ್, ಅನಿಮೇಶ್ ಕುಜುರ್, ಮಣಿಕಂಠ ಹೋಬಳಿದಾರ್ ಮತ್ತು ಅಮ್ಲಾನ್ ಬೋರ್ಗೊಹೈನ್ ಅವರನ್ನು ಒಳಗೊಂಡ ರಿಲಾಯನ್ಸ್‌ ತಂಡವು ಬುಧವಾರ ಇಲ್ಲಿ ನಡೆದ ಇಂಡಿಯನ್ ಓಪನ್ ರಿಲೇ ಪುರುಷರ 4x100 ಮೀಟರ್‌ ಸ್ಪರ್ಧೆಯಲ್ಲಿ 38.69 ಸೆಕೆಂಡುಗಳಲ್ಲಿ ಗುರಿ ತಲುಪಿ, ರಾಷ್ಟ್ರೀಯ ದಾಖಲೆ ನಿರ್ಮಿಸಿತು.

2010ರ ನವದೆಹಲಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಿರ್ಮಾಣವಾಗಿದ್ದ 38.89 ಸೆಕೆಂಡುಗಳ ದಾಖಲೆಯನ್ನು ರಿಲಾಯನ್ಸ್‌ ತಂಡ ಮುರಿಯಿತು.‌ ರಹಮತುಲ್ಲಾ ಮೊಲ್ಲಾ, ಸುರೇಶ್ ಸತ್ಯ, ಶಮೀರ್ ಮೋನ್ ಮತ್ತು ಎ. ಖುರೇಷಿ ಅವರನ್ನು ಒಳಗೊಂಡ ತಂಡವು 15 ವರ್ಷಗಳ ಹಿಂದೆ ದಾಖಲೆ ಬರೆದಿತ್ತು.

ಚಂಡೀಗಢದ ಸೆಕ್ಟರ್ 7 ಕ್ರೀಡಾ ಸಂಕೀರ್ಣದಲ್ಲಿ ನಡೆದ ಸ್ಪರ್ಧೆಯಲ್ಲಿ ತಮಿಳುನಾಡು (39.83 ಸೆಕೆಂಡ್‌) ಮತ್ತು ಆರ್ಮಿ (41.40 ಸೆಕೆಂಡ್‌) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದವು.

ADVERTISEMENT

ಫಲಿತಾಂಶ: ಪುರುಷರು: 4X100 ರಿಲೇ: ರಿಲಾಯನ್ಸ್‌ (ಕಾಲ: 38.69ಸೆ: ಗುರಿಂದರ್‌ವೀರ್ ಸಿಂಗ್, ಅನಿಮೇಶ್ ಕುಜುರ್, ಮಣಿಕಂಠ ಹೋಬಳಿಧರ್ ಮತ್ತು ಆಮ್ಲಾನ್ ಬೋರ್ಗೊಹೈನ್)–1, ತಮಿಳುನಾಡು (39.83ಸೆ)–2, ಆರ್ಮಿ (41.40ಸೆ)–3. 4X400 ರಿಲೇ: ಎನ್‌ಸಿಸಿ (3ನಿ.04.31ಸೆ: ಜಯ್ ಕುಮಾರ್, ವಿಶಾಲ್ ಟಿ.ಕೆ, ಮನು ಟಿ.ಎಸ್, ಡಿ. ಚೌಧರಿ)–1, ಎನ್‌ಸಿಸಿ 2 (3ನಿ.04.92ಸೆ)–2, ತಮಿಳುನಾಡು (3ನಿ.10.67ಸೆ)–3

ಮಹಿಳೆಯರು: 4X100 ರಿಲೇ: ಎನ್‌ಸಿಒಇ ತಿರುವನಂತಪುರ (44.12 ಸೆ: ಶ್ರಬಾನಿ ನಂದಾ, ಅಭಿನಯಾ ರಾಜರಾಜನ್, ಸ್ನೇಹಾ ಎಸ್.ಎಸ್, ನಿತ್ಯಾ ಜಿ)–1, ತಮಿಳುನಾಡು (46.07ಸೆ)–2, ಹರಿಯಾಣ (49.68ಸೆ)–3. 4X400 ರಿಲೇ: ಎನ್‌ಸಿಸಿ (3ನಿ.32.64ಸೆ: ಸ್ನೇಹಾ ಕೆ, ರೂಪಲ್ ಚೌಧರಿ, ಜಿಸ್ನಾ ಮ್ಯಾಥ್ಯೂ, ಶುಭಾ ವೆಂಕಟೇಶನ್)–1, ತಮಿಳುನಾಡು (3ನಿ.40.85ಸೆ)–2, ಉತ್ತರಪ್ರದೇಶ (3ನಿ.56.70ಸೆ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.