ADVERTISEMENT

ದಾಖಲೆ ಪ್ರಶಸ್ತಿಯತ್ತ ಹ್ಯಾಮಿಲ್ಟನ್ ದಾಪುಗಾಲು

ರಾಯಿಟರ್ಸ್
Published 24 ಜೂನ್ 2019, 18:53 IST
Last Updated 24 ಜೂನ್ 2019, 18:53 IST
ಫ್ರೆಂಚ್ ಫಾರ್ಮುಲಾ ಒನ್‌ ಗ್ರ್ಯಾನ್‌ ಪ್ರಿ ಪ್ರಶಸ್ತಿ ಗೆದ್ದ ನಂತರ ಮೈಮೇಲೆ ವೈನ್ ಚೆಲ್ಲಿ ಲೂಯಿಸ್ ಹ್ಯಾಮಿಲ್ಟನ್ ಸಂಭ್ರಮಿಸಿದರು –ರಾಯಿಟರ್ಸ್ ಚಿತ್ರ
ಫ್ರೆಂಚ್ ಫಾರ್ಮುಲಾ ಒನ್‌ ಗ್ರ್ಯಾನ್‌ ಪ್ರಿ ಪ್ರಶಸ್ತಿ ಗೆದ್ದ ನಂತರ ಮೈಮೇಲೆ ವೈನ್ ಚೆಲ್ಲಿ ಲೂಯಿಸ್ ಹ್ಯಾಮಿಲ್ಟನ್ ಸಂಭ್ರಮಿಸಿದರು –ರಾಯಿಟರ್ಸ್ ಚಿತ್ರ   

ಲೀ ಕ್ಯಾಸ್ಟಲಿಟ್, ಫ್ರಾನ್ಸ್‌: ಪ್ರಮುಖ ರೇಸ್ ಕಾರು ಚಾಲಕ ಲ್ಯೂಯಿಸ್ ಹ್ಯಾಮಿಲ್ಟನ್ ದಾಖಲೆಯ ಪ್ರಶಸ್ತಿಯತ್ತ ಹೆಜ್ಜೆ ಇರಿಸಿದ್ದಾರೆ. ಭಾನುವಾರ ಮುಕ್ತಾಯಗೊಂಡ ಫ್ರೆಂಚ್ ಫಾರ್ಮುಲಾ ಒನ್‌ ಗ್ರ್ಯಾನ್‌ ಪ್ರಿಯಲ್ಲಿ ಗೆಲುವು ಸಾಧಿಸಿದ ಅವರು ಈ ಋತುವಿನ ಆರನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದು ಅವರ ವೃತ್ತಿ ಜೀವನದ 79ನೇ ಪ್ರಶಸ್ತಿಯಾಗಿದೆ. ಈ ಋತುವಿನಲ್ಲಿ ಅವರು ಇನ್ನೂ 13 ರೇಸ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆ 91 ಪ್ರಸಸ್ತಿ ಗೆದ್ದರೆ ಮೈಕೆಲ್ ಶುಮಾಕರ್ ಅವರ ದಾಖಲೆ ಸರಿಗಟ್ಟಲಿದ್ದಾರೆ.

ಸತತ ನಾಲ್ಕನೇ ಪ್ರಶಸ್ತಿ ಗಳಿಸಿದ ನಂತರ ಭಾನುವಾರ ಮಾತನಾಡಿದ ಲೂಯಿಸ್ ‘ಇಲ್ಲಿಯ ವರೆಗೆ ಗಳಿಸಿರುವ ಪ್ರಶಸ್ತಿಗಳು ಖುಷಿ ನೀಡಿವೆ. ಒಂದೇ ಋತುವಿನಲ್ಲಿ ಆರು ರೇಸ್‌ಗಳನ್ನು ಗೆಲ್ಲುವ ಭರವಸೆ ಇರಲಿಲ್ಲ. ಆದರೆ ಅದು ಈಗ ಸಾಧ್ಯವಾಗಿದೆ’ ಎಂದರು.

1950ರಿಂದ ರ‍್ಯಾಲಿಗಳು ನಡೆಯುತ್ತಿದ್ದು ಒಂದೇ ಋತುವಿನಲ್ಲಿ 13ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಯಾವ ಚಾಲಕರೂ ಗೆದ್ದಿಲ್ಲ. 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಯಾವ ತಂಡವೂ ಗಳಿಸಲಿಲ್ಲ. ಗರಿಷ್ಠ ಸಾಧನೆ (10) ಮರ್ಸಿಡಿಸ್ ತಂಡ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.