ADVERTISEMENT

ಹಂಪಿ ಉತ್ಸವ- ರಾಜ್ಯಮಟ್ಟದ ಕುಸ್ತಿ| ಹರಪನಹಳ್ಳಿಯ ಕೆಂಚಪ್ಪ ಹಂಪಿ ಕಂಠೀರವ

ಹಂಪಿ ಉತ್ಸವ: ಶಾಹೀದಾ ಬೇಗಂಗೆ ಪ್ರಶಸ್ತಿ

ಎ.ಎಂ.ಸೋಮಶೇಖರಯ್ಯ
Published 28 ಜನವರಿ 2023, 18:47 IST
Last Updated 28 ಜನವರಿ 2023, 18:47 IST
ಮಹಿಳೆಯರ 55 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಗದುಗಿನ ಭುವನೇಶ್ವರಿ ಹಾಗೂ ವರಲಕ್ಷ್ಮಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರು
ಮಹಿಳೆಯರ 55 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಗದುಗಿನ ಭುವನೇಶ್ವರಿ ಹಾಗೂ ವರಲಕ್ಷ್ಮಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರು   

ಹಂಪಿ (ಹೊಸಪೇಟೆ): ಹರಪನಹಳ್ಳಿಯ ಕೆಂಚಪ್ಪ ಹಾಗೂ ಹೊಸಪೇಟೆ ತಾಲ್ಲೂಕಿನ ವೆಂಕಟಾಪುರದ ಶಾಹೀದಾ ಬೇಗಂ ಅವರು ಶನಿವಾರ ಹಂಪಿ ಉತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ‘ಹಂಪಿ ಕಂಠೀರವ’ ಪ್ರಶಸ್ತಿ ಜಯಿಸಿದರು.

ಕೆಂಚಪ್ಪ ಅವರು ಪುರುಷರ 86 ಕೆ.ಜಿ ವಿಭಾಗದಲ್ಲಿ ಗೆದ್ದರು. ಹೊಸಪೇಟೆ ಪ್ರಭು ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದ 57 ಕೆ.ಜಿ. ಸ್ಪರ್ಧೆಯಲ್ಲಿ ಶಾಹೀದಾ ಜಯಿಸಿದರು. 74 ಕೆ.ಜಿಯಲ್ಲಿ ಹರಪನಹಳ್ಳಿಯ ಶರತ್ (ಹಂಪಿ ಕೇಸರಿ), ದಾವಣಗೆರೆಯ ಭೀಮ ಸ್ಥಾನ ಗಳಿಸಿದರು. 57 ಕೆ.ಜಿ ವಿಭಾಗದಲ್ಲಿ ಕಂಪ್ಲಿಯ ವಿರೂಪಾಕ್ಷ ಗೆದ್ದು ಹಂಪಿ ಕಿಶೋರ ಗೌರವ ಗಳಿಸಿದರು. ಹೊಸಪೇಟೆಯ ಕೀರ್ತಿ ದ್ವಿತೀಯ ಸ್ಥಾನ ಪಡೆದರು. 65 ಕೆ.ಜಿ ವಿಭಾಗದಲ್ಲಿ ಹರಪನಹಳ್ಳಿಯ ಸಂಜು ಹಂಪಿ ಕುಮಾರ್, ಹಳಿಯಾಳದ ನೀಲಪ್ಪ ಹಳಿಯಾಳ ದ್ವಿತೀಯ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದ 57 ಕೆ.ಜಿ ಸ್ಪರ್ಧೆಯಲ್ಲಿ ಬಿನ್ನಾಳದ ಶ್ವೇತಾ ದ್ವಿತೀಯ ಸ್ಥಾನ ಪಡೆದರು. 55 ಕೆ.ಜಿ ವಿಭಾಗದಲ್ಲಿ ಗದುಗಿನ ಭುವನೇಶ್ವರಿ ಹಂಪಿ ಕೇಸರಿ, ಗದುಗಿನ ವರಲಕ್ಷ್ಮಿ ದ್ವಿತೀಯ ಸ್ಥಾನ ಪಡೆದರು. 53 ಕೆ.ಜಿ ವಿಭಾಗದಲ್ಲಿ ಬೆಂಗಳೂರಿನ ಬಷೀರ (ಹಂಪಿ ಕುಮಾರಿ), ಗದುಗಿನ ವೈಷ್ಣವಿ (ದ್ವಿತೀಯ), ‌50 ಕೆ.ಜಿ ವಿಭಾಗದಲ್ಲಿ ಕಂಪ್ಲಿಯ ತೇಜಸ್ವಿನಿ (ಹಂಪಿ ಕಿಶೋರಿ), ವಿಜಯಪುರದ ಸೋನಿಯಾ (ದ್ವಿತೀಯ) ಜಯಶಾಲಿಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.