ಚಿತ್ರದುರ್ಗ: ರಾಜ್ಯಮಟ್ಟದ ಹೊನಲು ಬೆಳಕಿನ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಆತಿಥೇಯ ಚಿತ್ರದುರ್ಗ ಹಾಗೂ ಬೆಳಗಾವಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದವು.
ರಾಜ್ಯ ಮತ್ತು ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ, ಕದಂಬ ಯೂತ್ ಹ್ಯಾಂಡ್‌ಬಾಲ್ ಸಂಸ್ಥೆಯಿಂದ ರಾಷ್ಟ್ರೀಯ ಹ್ಯಾಂಡ್‌ಬಾಲ್ ಕ್ರೀಡಾಪಟು ಎಸ್.ಎನ್. ಸ್ವಾಮಿ ಸ್ಮರಣಾರ್ಥ ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಪುರುಷರ ವಿಭಾಗದಲ್ಲಿ ಚಿತ್ರದುರ್ಗ ಹಾಗೂ ಬೆಂಗಳೂರಿನ ಸ್ಟಾರ್ ಶೂಟರ್ಸ್ ತಂಡಗಳ ನಡುವೆ ಹಣಾಹಣಿ ನಡೆಯಿತು. ಚಿತ್ರದುರ್ಗ ತಂಡವು ಬೆಂಗಳೂರು ತಂಡವನ್ನು 25–17ರಿಂದ ಮಣಿಸಿತು.
ಮಹಿಳೆಯರ ವಿಭಾಗದಲ್ಲಿ ಬೆಳಗಾವಿ ಹಾಗೂ ಶಿವಮೊಗ್ಗ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಬೆಳಗಾವಿ ತಂಡವು ಶಿವಮೊಗ್ಗ ತಂಡವನ್ನು 17–4ರಿಂದ ಸೋಲಿಸಿತು. ಮಂಗಳೂರು ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಹ್ಯಾಂಡ್‌ಬಾಲ್ ಸಂಸ್ಥೆ ರಾಜ್ಯ ಘಟಕದ ಅಧ್ಯಕ್ಷ ಡಾ. ಮನೋಜ್ ಪಿ. ಸಾಹುಕಾರ್, ಕಾರ್ಯಾಧ್ಯಕ್ಷ ಶಿವರಾಂ, ಕಾರ್ಯದರ್ಶಿ ಬಿ.ಎಲ್. ಲೋಕೇಶ್, ಉದ್ಯಮಿ ಸೈಟ್‌ಬಾಬು, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಜಯಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.