ADVERTISEMENT

ಚಿಕ್ಕಬಳ್ಳಾಪುರ: ಹರ್ಷಿತ್‌ ರಾಮ್‌, ಲಿಯಾ ಚೆಸ್‌ ಚಾಂಪಿಯನ್ಸ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 16:09 IST
Last Updated 17 ಜೂನ್ 2025, 16:09 IST
ಹರ್ಷಿತ್‌ ರಾಮ್
ಹರ್ಷಿತ್‌ ರಾಮ್   

ಚಿಕ್ಕಬಳ್ಳಾಪುರ: ಬೆಂಗಳೂರು ನಗರದ ಹರ್ಷಿತ್‌ ರಾಮ್‌ ಬಿ ಮತ್ತು ಲಿಯಾ ಆರ್‌.ಜೋಸೆಫ್ ಅವರು ಕರ್ನಾಟಕ ರಾಜ್ಯ ಓಪನ್‌ 11 ವರ್ಷದೊಳಗಿನವರ ಫಿಡೆ ರೇಟೆಡ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಓಪನ್ ವಿಭಾಗದಲ್ಲಿ 153 ಮಂದಿ ಮತ್ತು ಬಾಲಕಿಯರ ವಿಭಾಗದಲ್ಲಿ 82 ಮಂದಿ ಕಣದಲ್ಲಿದ್ದರು. ಭಾನುವಾರ ಮುಕ್ತಾಯಗೊಂಡ ಮೂರು ದಿನಗಳ ಈ ಟೂರ್ನಿಯು 9 ಸುತ್ತುಗಳನ್ನು ಒಳಗೊಂಡಿತ್ತು.

ಓಪನ್ ವಿಭಾಗದಲ್ಲಿ ಸಮಕ್ಷ್‌ ಅಶೋಕ್ ಎರಡನೇ, ಸ್ರಗ್ವಿದ ಎಸ್‌., ವೆಂಕಟನಾಗ ಮಲ್ಲಾದಿ ಮತ್ತು ತರುಣ್ ಬಿ ಕ್ರಮವಾಗಿ ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.

ADVERTISEMENT

ಬಾಲಕಿಯರ ವಿಭಾಗದಲ್ಲಿ ರಿಶ್ವಿತಾ ಮಹಾಜನ್, ಸೌಖ್ಯಾ ಕೆ.ಆರ್., ರಾಜೇಶ್ವರಿ ಅಯ್ಯಪ್ಪನ್, ರಿಝೆಲ್ ಅಲಿಡಾ ಡಿಸೋಜಾ ಕ್ರಮವಾಗಿ ಎರಡರಿಂದ ಐದರವರೆಗಿನ ಸ್ಥಾನ ಪಡೆದರು.

ಹರ್ಷಿತ್‌ ಮತ್ತು ಸಮಕ್ಷ್‌, ಲಿಯಾ ಮರ್ತು ರಿಶ್ವಿತಾ ಅವರು ಜಲಗಾಂವ್‌ನಲ್ಲಿ ಆಗಸ್ಟ್‌ 2 ರಿಂದ 8ರವರೆಗೆ ನಡೆಯಲಿರುವ ರಾಷ್ಟ್ರೀಯ 11 ವರ್ಷದೊಳಗಿನ ಓಪನ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಲಿಯಾ ಜೋಸೆಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.