ADVERTISEMENT

ಹೃದಯಾಘಾತ: ವಾಲಿಬಾಲ್ ಅಂಗಳದಲ್ಲೇ ಆಟಗಾರ ಸಾವು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 7:39 IST
Last Updated 28 ಮಾರ್ಚ್ 2021, 7:39 IST
ಮೃತ ಆಟಗಾರ ದೇವು ಅಂಚನ್
ಮೃತ ಆಟಗಾರ ದೇವು ಅಂಚನ್   

ಕಾಪು: ವಾಲಿಬಾಲ್ ಅಂಗಳದಲ್ಲೇ ಆಟಗಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ರಾಜ್ಯಮಟ್ಟದ ಆಟಗಾರ ದೇವು ಅಂಚನ್(35) ಮೃತಪಟ್ಟವರು.

ಶನಿವಾರ ರಾತ್ರಿ ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಇನ್ನಂಜೆಯ ಮೈದಾನದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ದೇವು ಅಂಚನ್ ಕೂಡ ಭಾಗವಹಿಸಿದ್ದರು. ವಾಲಿಬಾಲ್ ಪಂದ್ಯಾಟ ಮುಗಿಸಿ ಅಂಗಳದ ಬದಿಯಲ್ಲಿ ವಿಶ್ರಾಂತಿ ಪಡೆಯುವಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.