ADVERTISEMENT

ಹಾಕಿ ಇಂಡಿಯಾ ಲೀಗ್‌ 2026 ಜ. 5ರಿಂದ: ಭೋಲಾನಾಥ್ ಸಿಂಗ್

ಪಿಟಿಐ
Published 20 ಮೇ 2025, 16:14 IST
Last Updated 20 ಮೇ 2025, 16:14 IST
ಹಾಕಿ
ಹಾಕಿ   

ನೊಯ್ಡಾ: ಮುಂಬರುವ (2026ನೇ ಆವೃತ್ತಿಯ) ಹಾಕಿ ಇಂಡಿಯಾ ಲೀಗ್‌ ಜನವರಿ 5ರಂದು ಆರಂಭವಾಗಲಿದೆ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಮಂಗಳವಾರ ಇಲ್ಲಿ ತಿಳಿಸಿದರು.

ಏಳು ವರ್ಷಗಳ ನಂತರ ಈ ಲೀಗ್ 2024ರಲ್ಲಿ ಮರುಜೀವ ಪಡೆದಿದ್ದು, ಡಿಸೆಂಬರ್ 5 ರಿಂದ ಫೆಬ್ರುವರಿ 1ರವರೆಗೆ ನಡೆದಿತ್ತು. 

‘ಹಾಕಿ ಇಂಡಿಯಾ ಆಟಗಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಪುರುಷರ ವಿಭಾಗದಲ್ಲಿ ಎಂಟು ತಂಡಗಳು ಭಾಗವಹಿಸಲಿವೆ. ಆದರೆ ಮಹಿಳೆಯರ ವಿಭಾಗದಲ್ಲಿ ಮುಂದಿನ ವರ್ಷದಿಂದ ಈಗಿನ ನಾಲ್ಕರ ಬದಲು ಆರು ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯ ನಡೆಯುವ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ. ಭಾಗೀದಾರರ ಜೊತೆಗೆ ಚರ್ಚಿಸಿದ ನಂತರ ಇದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ಹಾಕಿ ಇಂಡಿಯಾ ಮತ್ತು ಅಮಿಟಿ ಯುನಿವರ್ಸಿಟಿ ಆನ್‌ಲೈನ್‌ ಎಜುಕೇಷನ್ ನಡುವಣ ಒಡಂಬಡಿಕೆಗೆ ಸಹಿಹಾಕಿದ ನಂತರ ಅವರು ಮಾತನಾಡಿದರು.

ವಿದೇಶಿ ಆಟಗಾರರ ಭಾವನೆ, ಕ್ರಿಸ್ಮಸ್‌ ಆಚರಣೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಜನವರಿ 5ರಂದು ಎಚ್‌ಐಎಲ್‌ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಈ ಹಿಂದಿನ ಎಚ್‌ಐಎಲ್‌ನಲ್ಲಿ ಭಾಗವಹಿಸಿದ ಕೆಲವು ರಾಷ್ಟ್ರೀಯ ಮತ್ತು ವಿದೇಶಿ ಆಟಗಾರರಿಗೆ ಫ್ರಾಂಚೈಸಿಗಳಿಂದ ಬಾಕಿ ಬರಬೇಕಾಗಿದೆ ಎಂಬ ವರದಿಗಳನ್ನು ಅವರು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.