
ಪಿಟಿಐ
ಭುವನೇಶ್ವರ: ಶಿಲಾನಂದ್ ಲಾಕ್ ಅವರ ಅಮೋಘ ಆಟದ ನೆರವಿನಿಂದ ಹೈದರಾಬಾದ್ ತೂಫಾನ್ಸ್ ತಂಡವು ಶುಕ್ರವಾರ ನಡೆದ ಪುರುಷರ ಹಾಕಿ ಇಂಡಿಯಾ ಲೀಗ್‌ನ (ಎಚ್‌ಐಎಲ್) ಎಲಿಮಿನೇಟರ್ ಪಂದ್ಯದಲ್ಲಿ 2–0 ಗೋಲುಗಳಿಂದ ಎಚ್‌ಐಎಲ್ ಜಿಸಿ ತಂಡವನ್ನು ಮಣಿಸಿತು. ಇದರೊಂದಿಗೆ ಕ್ವಾಲಿಫೈಯರ್ 2ಗೆ ಅರ್ಹತೆ ಪಡೆಯಿತು.
ತೂಫಾನ್ಸ್ ತಂಡದ ಪರ ಶಿಲಾನಂದ್ ಲಾಕ್ರ (16ನೇ ಮತ್ತು 39ನೇ ನಿ.) ಎರಡು ಗೋಲುಗಳನ್ನು ಬಾರಿ ಗೆಲುವಿನಲ್ಲಿ ಮಿಂಚಿದರು.
ತೂಫಾನ್ಸ್ ಮತ್ತು ಎಚ್‌ಐಎಲ್ ತಂಡಗಳು ಗುಂಪು ಹಂತದಲ್ಲಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಗಳಿಸಿ, ಎಲಿಮಿನೇಟರ್‌ಗೆ ಅರ್ಹತೆ ಪಡೆದಿದ್ದವು.
ತೂಫಾನ್ಸ್ ಭಾನುವಾರ ಕ್ವಾಲಿಫೈಯರ್ 2 ಪಂದ್ಯವನ್ನು ಆಡಲಿದೆ. ಎಚ್‌ಐಎಲ್ ತಂಡವು ಸೋಮವಾರ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಹೋರಾಟ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.