ಬೆಂಗಳೂರು: ಭಾರತ ಹಾಕಿ ತಂಡದ ಮಾಜಿ ಸಹಾಯಕ ಕೋಚ್ ರಮೇಶ್ ಪರಮೇಶ್ವರನ್ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ.
ಹಾಕಿ ಇಂಡಿಯಾ ಈಗಾಗಲೇ ಬಿ.ಜೆ. ಕಾರಿಯಪ್ಪಮತ್ತು ರೊಮೇಶ್ ಪಠಾಣಿಯಾ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ. ಆದ್ದರಿಂದ ರಮೇಶ್ ಅವರು ಹಾಕಿ ಕರ್ನಾಟಕ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ.
‘ಜೂನಿಯರ್ ಹಂತದ ಆಟಗಾರನಾಗಿ ಬೆಳೆದು ರಾಷ್ಟ್ರೀಯ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ ತೃಪ್ತಿಯಿದೆ. ನನ್ನ ಅನುಭವ, ವೃತ್ತಿಜೀವನದ ಏರಿಳಿತಗಳು, ಗೆಲುವು. ಸೋಲುಗಳನ್ನು ಸಮಗ್ರವಾಗಿ ಕಿರಿಯರೊಂದಿಗೆ ಹಂಚಿಕೊಂಡಿದ್ದೇನೆ. ನನ್ನ ಜೀವನದ ಬಹುಪಾಲು ಸಮಯ, ಧನ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದೇನೆ’ ಎಂದು ರಮೇಶ್ ಹೇಳಿದ್ದಾರೆ.
ಅವರು 2015ರಿಂದ ಕರ್ನಾಟಕ ಹಾಕಿ ಅಕಾಡೆಮಿಯ ಪ್ರತಿಭಾಶೋಧದ ಹೊಣೆ ನಿಭಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.