ADVERTISEMENT

ಹಾಕಿ: ಡೆಲ್ಲಿ ಪಬ್ಲಿಕ್‌ ಸ್ಕೂಲ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 17:44 IST
Last Updated 21 ನವೆಂಬರ್ 2022, 17:44 IST

ಬೆಂಗಳೂರು: ಮೊಹಮ್ಮದ್ ಆಶು ಸಿ.ಎಚ್‌. ಗಳಿಸಿದ ಆರು ಗೋಲುಗಳ ಬಲದಿಂದ ಡೆಲ್ಲಿ ಪಬ್ಲಿಕ್‌ ಸ್ಕೂಲ್ ಈಸ್ಟ್ ತಂಡವು ರಾಜ್ಯ ಸಿ ಡಿವಿಷನ್ ಲೀಗ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಸೋಮವಾರ ನಡೆದ ಪಂದ್ಯದಲ್ಲಿ 13–0ಯಿಂದ ನ್ಯೂ ಅಶೋಕ ಹಾಕಿ ಕ್ಲಬ್ ತಂಡವನ್ನು ಸೋಲಿಸಿತು. ಮೊಹಮ್ಮದ್‌ 6, 14, 22, 31, 45 ಮತ್ತು 48ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ನವಾಜ್‌ ಇ.ಸಿ. (17, 33ನೇ ನಿ.), ಸಾದಿಕ್‌ (8, 10ನೇ ನಿ.), ತೇಜಸ್‌ ರೆಡ್ಡಿ (18ನೇ ನಿ.), ಶಾನೂಲ್‌ (43ನೇ ನಿ.) ಮತ್ತು ಹರ್ಷಿಕ್ ಶಮಲ್‌ (44ನೇ ನಿ.) ಗೋಲು ದಾಖಲಿಸಿದರು.

ಇನ್ನೊಂದು ಪಂದ್ಯದಲ್ಲಿ ಸಹ್ಯಾದ್ರಿ ಹಾಕಿ ಕ್ಲಬ್‌ 4–0ಯಿಂದ ಜರ್ಮನೈಟ್‌ ಅಕಾಡೆಮಿ ಎದುರು ಗೆದ್ದಿತು. ತಂಡದ ಪರ ಸುರೇಶ್‌ (8, 14ನೇ ನಿ.), ಗಗನ್‌ (16ನೇ ನಿ.) ಮತ್ತು ಮಧು ಜಿ.ಎಚ್‌. (27ನೇ ನಿ.) ಗೋಲು ಹೊಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.